ಮರಾಟಿ ಸಮಾಜ ಬಾಂಧವರ ಕ್ರೀಡಾಕೂಟ ಮತ್ತು ಸತ್ಯನಾರಾಯಣ ಪೂಜೆಯ ಆಮಂತ್ರಣ ಬಿಡುಗಡೆ

0

ಮರಾಟಿ ಸಮಾಜ ಸೇವಾ ಸಂಘ ಸುಳ್ಯ, ಮರಾಟಿ ಮಹಿಳಾ ವೇದಿಕೆ ಮತ್ತು ಯುವ ವೇದಿಕೆ ಹಾಗೂ ಮರಾಟಿ ಧಾರ್ಮಿಕ ಚಿಂತನಾ ಸಮಿತಿ ವತಿಯಿಂದ ನ.9 ರಂದು ನಡೆಯಲಿರುವ ವಾರ್ಷಿಕ ಕ್ರೀಡಾ ಕೂಟ ಹಾಗೂ ನ.16 ರಂದು ನಡೆಯಲಿರುವ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣವನ್ನು ಅ.12 ರಂದು ಗಿರಿದರ್ಶಿನಿ ಸಭಾಭವನದ ವಠಾರದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ
ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ , ಮಾಜಿ ಅಧ್ಯಕ್ಷರುಗಳಾದ ಸೀತಾನಂದ ಬೇರ್ಪಡ್ಕ, ನಾರಾಯಣ ನಾಯ್ಕ್ ಬೀರಮಂಗಲ, ಪ್ರ.ಕಾರ್ಯದರ್ಶಿ ರಮೇಶ್ ನೀರಬಿದಿರೆ, ಉಪಾಧ್ಯಕ್ಷೆ ಸುಲೋಚನಾ ಕುರುಂಜಿಗುಡ್ದೆ, ಕೋಶಾಧಿಕಾರಿ ಐತ್ತಪ್ಪ ನಾಯ್ಕ್, ಕಾರ್ಯಕಾರಿ ಸದಸ್ಯರಾದ ಜಗದೀಶ್ ಅರಂಬೂರು, ಶೋಭಾ ಎ.ಕೆ.ನಾಯ್ಕ್, ಮಹಿಳಾ ವೇದಿಕೆ ಕಾರ್ಯದರ್ಶಿ ನಳಿನಾಕ್ಷಿ ಬೇರ್ಪಡ್ಕ, ಜಾಲ್ಸೂರು ಗ್ರಾಮ ಸಮಿತಿಯ ಶಿವಪ್ಪ ನಾಯ್ಕ ಕಜೆಗದ್ದೆ, ಕೃಷ್ಣಪ್ಪ ನಾಯ್ಕ್ ಜಾಲ್ಸೂರು, ಆಲೆಟ್ಟಿ ಗ್ರಾಮ ಸಮಿತಿಯ ಆನಂದ ನಾಯ್ಕ ತಲೆಪಳ್ಳ, ಅಜ್ಜಾವರ ಗ್ರಾಮ ಸಮಿತಿಯ ಕಾರ್ತಿಕ್ ಡಿ.ವಿ.,ಮಹಾಲಿಂಗ ನಾಯ್ಕ ಚೊಕ್ಕಾಡಿ, ಮಹಿಳಾ ವೇದಿಕೆಯ ಸುಮಲತಾ ಗೋಪಾಲ್, ಸುಮಿತ ದೊಡ್ಡೇರಿ, ಪದ್ಮಿನಿ ದೊಡ್ಡೇರಿ, ಯುವ ವೇದಿಕೆಯ ಅಶೋಕ್ ದೊಡ್ಡೇರಿ, ಶಶಿಕುಮಾರ್ ಆಲೆಟ್ಟಿ, ಜಿತೇಶ್ ಕುರುಂಜಿಗುಡ್ಡೆ,ಪುನಿತ್ ಮುಂಡಕಜೆ, ಮೊದಲಾದವರು ಉಪಸ್ಥಿತರಿದ್ದರು.


ವಾರ್ಷಿಕ ಕ್ರೀಡಾ ಕೂಟ ಮತ್ತು ಗಣಹವನ ಮತ್ತು ಸತ್ಯನಾರಾಯಣ ದೇವರ ಪೂಜೆ ಗಿರಿದರ್ಶಿನಿ ಸಭಾಭವನದ ವಠಾರದಲ್ಲಿ ನಡೆಯಲಿದೆ. ಡಿ.7 ರಂದು ಸಂಘದ ಮರಾಟಿ ಧಾರ್ಮಿಕ ಚಿಂತನೆ ಸಮಿತಿ ವತಿಯಿಂದ ಹೊರಬರಲಿರುವ ಮರಾಟಿಗರ ಗೋಂದೋಳು ಪೂಜೆ ಹಿನ್ನಲೆ, ಆಚರಣೆಯ ವಿಧಿವಿಧಾನಗಳು, ಇತರ ಪ್ರಮುಖ ಆಚರಣೆಗಳು ಪುಸ್ತಕ ಬಿಡುಗಡೆಗೊಳ್ಳಲಿದೆ.