ಪಂಬೆತ್ತಾಡಿ: ಅಕ್ಷತಾ ಯುವತಿ ಮಂಡಲ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

0

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಅಕ್ಷತಾ ಯುವತಿ ಮಂಡಲ (ರಿ.) ಪಂಬೆತ್ತಾಡಿ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ 2025, 75 ದಿನಗಳ ಸ್ವಚ್ಚತಾ ಅಭಿಯಾನದ ಚಾಲನೆ ಅ. 12 ರಂದು ಪಂಜ ಪದವಿ ಪೂರ್ವ ಕಾಲೇಜು ನಲ್ಲಿ ಸ್ವಚ್ಛತೆ ಮಾಡುವ ಮೂಲಕ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ, ಪಂಬೆತ್ತಾಡಿ ಅಕ್ಷತಾ ಯುವತಿ ಮಂಡಲ ಅಧ್ಯಕ್ಷರಾದ ಶ್ರೀಮತಿ ಧನಲಕ್ಷ್ಮಿ ಮಠ ಮತ್ತು ಸದಸ್ಯರು, ಹಾಗೂ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಜನಾರ್ಧನ ನಾಗತೀರ್ಥ , ಆದರ್ಶ ಚಿದ್ಗಲ್ಲು ಮತ್ತು ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲ ಅಧ್ಯಕ್ಷರಾದ ಲೋಕೇಶ್ ಪಂಜದಬೈಲು ಉಪಸ್ಥಿತರಿದ್ದರು