ಚಂದನ ಸಾಹಿತ್ಯ ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ

0

ಸುಳ್ಯದ ಚಂದನ ಸಾಹಿತ್ಯ ವೇದಿಕೆಯು ಇತ್ತೀಚಿಗೆ 20ನೇ ವರ್ಷದ ವಾರ್ಷಿಕೋತ್ಸವ ಆಚರಿಸಿತು. ಅದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಖ್ಯಾತ ಕವಯಿತ್ರಿ ಸಂಧ್ಯಾ (ಸಾನು) ಉಬರಡ್ಕ, ಗೌರವಾಧ್ಯಕ್ಷರಾಗಿ ಎಚ್ ಭೀಮರಾವ್ ವಾಷ್ಠರ್, ಕಾರ್ಯದರ್ಶಿಯಾಗಿ ಪೆರುಮಾಳ್ ಲಕ್ಷ್ಮಣ್ ಮತ್ತು ಕೋಶಾಧಿಕಾರಿಯಾಗಿ ಅರುಣ್ ರಾವ್ ಜಾಧವ್ ರವರು ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಯೋಗೇಶ್ವರನಂದ ಸರಸ್ವತಿ ಸ್ವಾಮೀಜಿ, ಪ್ರಭಾಕರ ಶಿಶಿಲ, ತೇಜಶ್ವರ್ ಕುಂದಲ್ಪಾಡಿ, ಸಾವಿತ್ರಿ ದೊಡ್ಡತೋಟ, ಹಾ.ಮ ಸತೀಶ್, ಹರಿ ನರಸಿಂಹ ಉಪಾಧ್ಯಾಯ, ಪಿ ಎಸ್ ವೈರೇಶ್, ನಾರಾಯಣ ರೈ ಕುಕ್ಕುವಳ್ಳಿ, ಜೂನಿಯರ್ ಪ್ರಭಾಕರ್, ವಿಜಯಕುಮಾರ್ ಕಾಣಿಚ್ಚಾರ್ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಅನುರಾಧ ಶಿವಪ್ರಕಾಶ್, ಗೌರವ ಕಾರ್ಯದರ್ಶಿಗಳಾಗಿ ಸುಮಂಗಲ ಲಕ್ಷ್ಮಣ್ ಕೋಳಿವಾಡ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಮೀಳಾ ರಾಜ್ ಐವರ್ನಾಡು, ಸಹ ಕಾರ್ಯದರ್ಶಿಯಾಗಿ ಪ್ರಿಯಾ ಸುಳ್ಯ, ಸಂಚಾಲಕರಾಗಿ ಪರಿಮಳ ಐವರ್ನಾಡು, ಕಾರ್ಯಕಾರಿ ಸದಸ್ಯರಾಗಿ ಎಂ.ಎ ಮುಸ್ತಫ ಬೆಳ್ಳಾರೆ, ಪ್ರಣವಿ ಎಂ, ಪುಷ್ಪಾವತಿ ಎಡಮಂಗಲ, ಮುರಳಿ ಕೃಷ್ಣ ನೀಚಾಲು, ಪೂರ್ಣಿಮಾ ತೋಟ ಪಾಡಿ ಶೋಭಾ ಬೆಳ್ಳಾರೆ, ಸಮ್ಯಕ್ತ ಜೈನ್ ಕಡಬ, ಬಾಲಕೃಷ್ಣ ಬಿ ಕಡಬ, ವಿಜಯಕುಮಾರ್ ಸುಳ್ಯ ಇನ್ನಿತರರು ಆಯ್ಕೆಯಾದರು.