ಸಂಪಾಜೆ : ಅಂಗನವಾಡಿ ಶಾಲಾ ಕಟ್ಟಡ ದುರಸ್ತಿಗೆ ಅನುದಾನಕ್ಕಾಗಿ ಮನವಿ

0


ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಸಮಿತಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನರವಾಡೆ ವಿನಾಯಕ್ ಕರ್ಬಾರಿ ಭೇಟಿ ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಳೆ ಹಾನಿ ಯೋಜನೆಯಡಿ ಅಂಗನವಾಡಿ ಶಾಲಾ ಕಟ್ಟಡ ದುರಸ್ತಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಲಾಯಿತು.


ಸಂಪಾಜೆ ಗ್ರಾಮ ಪಂಚಾಯತ್ ಗೆ ಖಾಯಂ ಕಾರ್ಯದರ್ಶಿ ನೇಮಕ ಖಾಲಿ ಇರುವ ಪಂಪ್ ಆಪರೇಟರ್ ಹುದ್ದೆಗೆ ನೇಮಕಾತಿ
ಕಳೆದ 4 ವರ್ಷಗಳಿಂದ 15 ನೇ ಹಣಕಾಸು ಯೋಜನೆಯಡಿ ಮಿತಿಗಿಂತ ೯ಲಕ್ಷ ರೂಪಾಯಿ ಅನುಧಾನ ಕಡಿತ ಆಗಿದ್ದು ಪರಿಶೀಲಿಸಿ ಸೂಕ್ತ ಕ್ರಮದ ಬಗ್ಗೆ ದಾಖಲೆ ಸಮೇತ ಮನವಿ ಸಲ್ಲಿಸಲಾಯಿತು.


ಸಕರಾತ್ಮಕವಾಗಿ ಸ್ಪಂದಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ನಿಯೋಗದಲ್ಲಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಜಿ ಕೆ ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ ಸದಸ್ಯರಾದ ವಿಮಲಾ ಪ್ರಸಾದ್ ಉಪಸ್ಥಿತರಿದ್ದರು.