ತೆಕ್ಕಿಲ್ ಹೆಚ್ ಪಿ ಗ್ಯಾಸ್ ಸಿಬ್ಬಂದಿ ವರ್ಗದವರಿಂದ ಟಿ.ಎಮ್ ಶಹೀದ್ ತೆಕ್ಕಿಲ್ ರವರಿಗೆ ಸನ್ಮಾನ

0


ಅರಂತೋಡು ತೆಕ್ಕಿಲ್ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ವರ್ಗದವರಿಂದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದ ಸಂಸ್ಥೆಯ ಮಾಲಕರಾದ ಟಿ.ಎಂ ಶಹೀದ್ ತೆಕ್ಕಿಲ್ ರವರನ್ನು ಒ. 11 ರಂದು ಸನ್ಮಾನಿಸಲಾಯಿತು. ಸನ್ಮಾನವನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ನೆರವೇರಿಸಿದರು.

ತೆಕ್ಕಿಲ್ ಹೆಚ್.ಪಿ.ಗ್ಯಾಸ್ ಏಜೆನ್ಸಿಯ ವ್ಯವಸ್ಥಾಪಕ ಧನುರಾಜ್ ಊರುಪಂಜ, ಬಬಿತ ಅಡ್ಯಡ್ಕ, ಬಿಂದ್ಯಾ ಕಿರ್ಲಾಯ, ರಹೀಮ್ ನಾರ್ಕೋಡು, ಉಮ್ಮರ್ ಬೆಳ್ಳಾರೆ, ಹನೀಫ್ ಮೊಟ್ಟೆಂಗಾರ್ , ಮೊಕ್ಷಿತ್ ನಾಗನ, ಚಂದ್ರಶೇಖರ ಕೊಯನಾಡು, ಖಾದರ್ ಕಡೆಪಾಲ ಮೊದಲಾದವರು ಉಪಸ್ಥಿತರಿದ್ದರು.