ಪಿಡಿಒ, ಆಡಳಿತ ಮಂಡಳಿ ದೌರ್ಜನ್ಯದಿಂದ ಮಳಖೇಡ ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕಿ ಆತ್ಮಹತ್ಯೆ : ಸುಳ್ಯದಲ್ಲಿ ಮನವಿ ಸಲ್ಲಿಕೆ

0

ವೇತನ ಸಿಗದ‌ ಕಾರಣಕ್ಕೆ ನೊಂದು ಸೇಡಂ ನ ಮಳಖೇಡ ಗ್ರಂಥಪಾಲಕಿ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಇವರ ಆತ್ಮಹತ್ಯೆಗೆ ಕಾರಣವಾಗಿರುವ ಪಿಡಿಒ‌ ವಿರುದ್ಧ ‌ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಅ.14ರಂದು ಸುಳ್ಯ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರು ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಸುಳ್ಯ ತಾಲೂಕಿನ ಎಲ್ಲಾ ಮೇಲ್ವಿಚಾರಕರು ಗ್ರಂಥಾಲಯ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಸಾವಿತ್ರಿಕಣೆಮರಡ್ಕ ಮಂಡೆಕೋಲು ಸುಳ್ಯ ತಾಲೂಕು ಅಧ್ಯಕ್ಷ ಅಭಿಲಾಷ ಗುತ್ತಿಗಾರು ಕಾರ್ಯದರ್ಶಿ ಸಂತೋಷ ಮುಂಡಕಜೆ ಅಮರಮಡ್ನೂರು ಸದಾನಂದ ಎಣ್ಮೂರು, ಶಶಿಕಲಾ ಬೆಳ್ಳಾರೆ, ಪ್ರಪುಲ್ಲ ದೇವಚಳ್ಳ, ರಾಜೇಶ್ವರಿ ಆಲೆಟ್ಟಿ,ಚಿತ್ರಾವತಿ ಉಭರಡ್ಕ,ರೇಖಾ ನೆಲ್ಲೂರು ಕೆಮ್ರಾಜೆ, ಸುಚಿತ್ರ ಜಾಲ್ಸೂರು,ಪ್ರಶಾಂತ್ ಪೆರುವಾಜೆ ಲಕ್ಷ್ಮಿ ಅಜ್ಜಾವರ ಲೀಲಾವತಿ ಐವರ್ನಾಡು, ಉಮಾವತಿ ಕೊಡಿಯಾಲ ಈ ಸಂದರ್ಭದಲ್ಲಿ ಇದ್ದರು.