ಪಂಬೆತ್ತಾಡಿ ಅಕ್ಷತಾ ಯುವತಿ ಮಂಡಲ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಎರಡನೇ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಅಕ್ಷತಾ ಯುವತಿ ಮಂಡಲ (ರಿ.) ಪಂಬೆತ್ತಾಡಿ ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ- 2025. 75 ದಿನಗಳ ಸ್ವಚ್ಚತಾ ಅಭಿಯಾನದ ಅಂಗವಾಗಿ ಎರಡನೇ ಕಾರ್ಯಕ್ರಮ ಅ.13 ರಂ ಯ ಪಂಬೆತ್ತಾಡಿ ಸೊಸೈಟಿ ಬಳಿ ಸ್ವಚ್ಛತೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಮಠ ಮತ್ತು ಸದಸ್ಯರು, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ ಅಧ್ಯಕ್ಷ ಲೋಕೇಶ್ ಪಂಜದಬೈಲು ಮತ್ತು ಸದಸ್ಯರು ಉಪಸ್ಥಿತರಿದ್ದರು.