ಗಾಂಧಿನಗರ ಕೇಂದ್ರೀಯ ಜುಮ್ಮಾ ಮಸೀದಿಯಲ್ಲಿ ಶೇಕ್ ಜೀಲಾನಿ ತಂಙಳ್ ರವರ ಅನುಸ್ಮರಣೆ ಕಾರ್ಯಕ್ರಮ ಅ 14 ರಂದು ನಡೆಯಿತು.
ಮಸೀದಿಯ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ರವರು ದಿಖ್ರ್ ನೇರ್ಚೆಯ ನೇತೃತ್ವವನ್ನು ವಹಿಸಿದ್ದರು.

ಬಳಿಕ ಅನುಸ್ಮರಣಾ ಭಾಷಣವನ್ನು ಮಾಡಿ ನಮಾಜಿನ ಪ್ರಾಮುಖ್ಯತೆ ಮತ್ತು ಅದನ್ನು ನಿರ್ವಹಿಸಬೇಕಾದ ಕಡ್ಡಾಯದ ಕುರಿತು ಹಿತವಚನ ನುಡಿದರು. ಬಳಿಕ ದುವಾ ಮಜ್ಲಿಸ್ ನಡೆಯಿತು.

ಕಾರ್ಯಕ್ರಮದಲ್ಲಿ ಅಸ್ಸಯ್ಯದ್ ಕುಂಞಿ ಕೋಯ ತಂಙಳ್, ಸಯ್ಯಿದ್ ತಾಹಿರ್ ತಂಙಳ್, ಸಯ್ಯಿದ್ ಝೖನುಲ್ ಆಬಿದೀನ್ ತಂಙಳ್ ಜಯನಗರ, ಸಯ್ಯಿದ್ ಹುಸೈನ್ ತಂಙಳ್ ಅನ್ಸಾರಿಯಾ ಹಾಗೂ ಸದರ್ ಮುಅಲ್ಲಿಮ್ ಸಿರಾಜುದ್ದೀನ್ ಸಖಾಫಿ, ಅಬೂಬಕ್ಕರ್ ಹಿಮಾಮಿ ಸಖಾಫಿ ಅನ್ಸಾರಿಯಾ, ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಹಾಗೂ ಮುಅಲ್ಲಿಮ್ ವೃಂದ,ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ ಹಾಜಿ ಕೆ ಎಂ ಮಹಮ್ಮದ್ ಕೆಎಂಎಸ್, ಉಪಾಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ಪ್ರಧಾನ ಕಾರ್ಯದರ್ಶಿ ಹಾಜಿ ಐ ಇಸ್ಮಾಯಿಲ್,ಕೋಶಾಧಿಕಾರಿ ಹಾಜಿ ಅಬ್ದುಲ್ ಹಮೀದ್ ಎಸ್ ಎಂ,ನಿರ್ದೇಶಕರಾದ ಉಮ್ಮರ್ ಕೆ ಎಸ್,ಹಾಜಿ ಕೆ ಎಂ ಮುಸ್ತಫಾ,ಶಾಹುಲ್ ಹಮೀದ್ ಕುತ್ತಮೊಟ್ಟೆ,ಹಾಜಿ ಕೆ ಎಂ ಮುಹ್ಯದ್ದೀನ್ ಪ್ಯಾನ್ಸಿ,ಹಾಜಿ ಯಾಕೂಬ್ ಎಸ್ ಟಿ,ಹಾಜಿ ಅಬ್ದುಲ್ ಗಫಾರ್,ಸಿದ್ದೀಕ್ ಕೊಡಿಯಮ್ಮೆ, ಹಾಗೂ ನೂರಾರು ಮಂದಿ ಜಮಾಅತ್ ಸದಸ್ಯರುಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಶೀರಣಿ ವಿತರಣೆ ನಡೆಯಿತು.

























