ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನೋಂದಾಯಿತ ಸದಸ್ಯರಿಗೆ ಮರಣ ಸಾಂತ್ವನ ನಿಧಿಯ ಚೆಕ್ ವಿತರಣೆ

0

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸಂಘದ ಮರಣ ಸಾಂತ್ವನ ನಿಧಿಯಲ್ಲಿ ಹೆಸರು ನೋಂದಾಯಿಸಿ ಮೃತಪಟ್ಟ ಸದಸ್ಯರ ನಾಮಿನಿದಾರರಿಗೆ ತಲಾ ರೂ. 10 ಸಾವಿರದಂತೆ ಅ. 15 ರಂದು ವಿತರಿಸಲಾಯಿತು.

ಆಲೆಟ್ಟಿ ಪಂಜಿಮಲೆ ನಿವಾಸಿ ನವೀನ್ ಕುಮಾರ್ ರವರ ಪತ್ನಿ ಶ್ರೀಮತಿ ವಿಜಯ, ರೂಪಾನಂದ ಕುಂಭಕೊಡು ರವರ ಪತ್ನಿ ಶ್ರೀಮತಿ ಮೀನಾಕ್ಷಿ, ಕೊಲ್ಚಾರು ಕೃಷ್ಣವೇಣಿ ಯವರ ಪುತ್ರ ದೀಕ್ಷಿತ್, ಕಣಕ್ಕೂರು ಪರಮೇಶ್ವರ ನಾಯ್ಕ್ ರವರ ಪುತ್ರ ಪ್ರವೀಣ್ ಕೆ ಯವರಿಗೆ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ರವರು ಪ್ರತಿ ಸದಸ್ಯರ ಮನೆಗೆ ತೆರಳಿ ಚೆಕ್ ನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಹರಿಪ್ರಸಾದ್ ಕಾಪುಮಲೆ, ನಿರ್ದೇಶಕರಾದ ಕರುಣಾಕರ ಹಾಸ್ಪಾರೆ, ಗಂಗಾಧರ ಬಡ್ಡಡ್ಕ, ಚಿದಾನಂದ ಕೊಲ್ಚಾರು, ಧರ್ಮಪಾಲ ಕೊಯಿಂಗಾಜೆ, ಉಷಾ ಪಾಲಡ್ಕ,ಉಮೇಶ್ ನಾಯ್ಕ್ ಮಜಿಗುಂಡಿ, ರಾಮದಾಸ್ ಮೊರಂಗಲ್ಲು, ಸಿ.ಇ. ಒ ದಿನಕರ ಆಲೆಟ್ಟಿ ಹಾಗೂ ಸಿಬ್ಬಂದಿ ವರ್ಗದವರಿದ್ದರು.