ಶಾಂತಿನಗರ ಮುಸ್ಲಿಂ ವೆಲ್ವೇರ್ ಅಸೋಸಿಯೇಷನ್(ರಿ) ಇದರ ವತಿಯಿಂದ ಮಾಸಿಕ ಸ್ವಲಾತ್ ಮಜ್ಲೀಸ್ ಹಾಗೂ ಪ್ರಾರ್ಥನಾ ಸಂಗಮ ಅ 12 ರಂದು ನಡೆಯಿತು.
ಸ್ವಲಾತ್ ಮತ್ತು ದುವಾ ನೇತೃತ್ವವನ್ನು ಎಲಿಮಲೆ ಮಸೀದಿ ಮುದರ್ರಿಸ್ ಸಯ್ಯದ್ ಮುಹ್ಸಿನ್ ಸಯ್ಯದ್’ಅಲವಿ ಕೋಯ ಕುಂಜಿಲಂ ತಂಙಳ್ ನಿರ್ವಹಿಸಿದರು.















ಉದ್ಯೋಧನೆಯನ್ನು ಮೊಗರ್ಪಣೆ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಅಲ್-ಖಾಮಿಲ್ ಮುದುಗಡ ರವರು ಮಾಡಿದರು.
ಗಣ್ಯಉಪಸ್ಥಿತರಾಗಿ ಪೈಚಾರ್ ಬದ್ರಿಯಾ ಜುಮಾ ಮಸೀದಿ
ಖತೀಬರಾದ ಶಮೀರ್ ಅಹ್ಮದ್ ನಈಮಿ, ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷರಾದ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್,ಮೊಗರ್ಪಣೆ ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಸಿ ಎಂ ಉಸ್ಮಾನ್ ಹಾಗೂ ಇತರ ಗಣ್ಯರುಗಳು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಭಾಷಣ ಸ್ಥಳೀಯ ಸದರ್ ಮುಅಲ್ಲಿಂ ಅಬ್ದುರಶೀದ್ ಝೖನಿ ಪೆರಾಜೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳಿಯ ಮದ್ರಸ ಕಮಿಟಿ ಅಧ್ಯಕ್ಷರಾದ ಹಾಜಿ ಪಳ್ಳಿಕುಂಞಿ ರವರು ವಹಿಸಿದ್ದರು.
ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಗೂ ಸಮಿತಿಯ ಸದಸ್ಯರು ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶೀರಣಿ ವಿತರಣೆ ನಡೆಯಿತು.










