ಕಾಣಿಯೂರು ನಿಲ್ದಾಣವನ್ನು ಏಲಡ್ಕಕ್ಕೆ ಸ್ಥಳಾಂತರಿಸಿ ಏಲಡ್ಕದ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಟರ್ಮಿನಲ್ ನಿಲ್ದಾಣ ಸ್ಥಾಪನೆಗೆ ಮನವಿ
ಸುಳ್ಯ ವಿಧಾನಸಭಾ ಕ್ಷೇತ್ರದ ಏಲಡ್ಕದಲ್ಲಿ ರೈಲ್ವೇ ನಿಲ್ದಾಣ ಸ್ಥಾಪಿಸುವಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಅ.15 ರಂದು
ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಮನವಿ ಸಲ್ಲಿಸಿದರು.















ಸುಳ್ಯ ವಿಧಾನಸಭಾ ಕ್ಷೇತ್ರದ ಮಂಗಳೂರು-ಹಾಸನ ಮಾರ್ಗದಲ್ಲಿ ಬರುವ ಕಾಣಿಯೂರು ರೈಲು ನಿಲ್ದಾಣವುಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಹತ್ತಿರದಲ್ಲಿದ್ದು ಜನರು ಈ ರೈಲು ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ. ಇದರ ಹೊರತಾಗಿಯೂ ನಿಲ್ದಾಣವು ಅಭಿವೃದ್ಧಿಯಾಗಿಲ್ಲ ಹಾಗಾಗಿ ಕಾಣಿಯೂರು ನಿಲ್ದಾಣವನ್ನು ಏಲಡ್ಕಕ್ಕೆ ಸ್ಥಳಾಂತರಿಸಿ ಏಲಡ್ಕದ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಟರ್ಮಿನಲ್ ನಿಲ್ದಾಣವನ್ನು ಅಭಿವೃದ್ಧಿಪಡಿಸಿ, ಹಲವು ಪ್ಲಾಟ್ಫಾರ್ಮ್ಗಳು, ಪಿಟ್ ಲೈನ್ಗಳು, ಸ್ಟೇಬಲ್ ಲೈನ್ಗಳು, ಕೋಚಿಂಗ್ ಡಿಪೋ ಅಲ್ಲಿ ಸ್ಥಾಪಿಸಬೇಕು. ಇದರಿಂದ ನೈರುತ್ಯ ರೈಲ್ವೆಗೆ ಈ ಪ್ರದೇಶದಿಂದ ದೂರದ ರೈಲುಗಳನ್ನು ಪ್ರಾರಂಭಿಸಲು ಮತ್ತು ನಿರ್ವಹಿಸಲು, ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ನಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್ ಮತ್ತು ಮಂಗಳೂರು ನಿಲ್ದಾಣಗಳಿಗೆ ಸ್ಯಾಟ್ ಲೈಟ್ ನಿಲ್ದಾಣ, ಟರ್ಮಿನಲ್ ಆಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ನಿಟ್ಟಿನಲ್ಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲು
ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮಾನ್ಯ ಶಾಸಕರು ರೈಲ್ವೆ ಸಚಿವರಿಗೆ ವಿನಂತಿಸಿದ್ದಾರೆ.
ಕಾಣಿಯೂರು ಸೊಸೈಟಿಯ ಅಧ್ಯಕ್ಷ ,ಕಾಣಿಯೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಗಣೇಶ ಉದನಡ್ಕ , ರೈಲ್ವೆ ಬಳಕೆದಾರರ ಸಂಘದ ಸದಸ್ಯ ಶಂಕರನಾರಾಯಣ ಭಟ್ ಕುಂಞ್ಞಹಿತ್ಲು , ಪ್ರಸಾದ್ ಕಾಟೂರು ಉಪಸ್ಥಿತರಿದ್ದರು.










