



















ಪಂಜ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರಾದ ಪ್ರೊ. ಲ.ರಂಗಯ್ಯ ಶೆಟ್ಟಿಗಾರ್ MJF ಇವರ ಅಧಿಕೃತ ಭೇಟಿ ಕಾರ್ಯಕ್ರಮ ಅ.11 ರಂದು ನಡೆಯಿತು. ಸೇವಾ ಕಾರ್ಯದಲ್ಲಿ ಪಂಜ ಲಯನ್ಸ್ ಜಿಲ್ಲೆಯಲ್ಲಿಯೇ 2ನೇ ಸ್ಥಾನ ಪಡೆದ ಸಂಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಲ. ನಾಗೇಶ್ ಕಿನ್ನಿಕುಮೇರಿ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಲ.ವಿಮಲ ರಂಗಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. 13 ವರ್ಷಗಳ ಕಾಲ ಪಂಜದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಡಾ.ಮಂಜುನಾಥ ರನ್ನು ಸನ್ಮಾನಿಸಲಾಯಿತು. ಪ್ರತಿಭಾ ಸಂಪನ್ನಳಾಗಿ ಹಲವು ಕ್ಷೇತ್ರಗಳಲ್ಲಿ ಮೇರು ಸಾಧನೆಗೈದಿರುವ ಅಂತರಾಷ್ಟ್ರೀಯ ಬಾಲ ಪ್ರತಿಭೆ ಕು. ಹಾರ್ದಿಕ ಕೆರೆಕೋಡಿಯವರನ್ನು ಅಭಿನಂದಿಸಿ ಗೌರವಿಸಲಾಯಿತು. ಲಯನ್ಸ್ ಜಿಲ್ಲೆಯಲ್ಲಿ ಉತ್ತಮ ಮಾರ್ಗದರ್ಶನ ದೊಂದಿಗೆ ಕಾರ್ಯನಿರ್ವಾಹಿಸುತ್ತಿರುವ ಪ್ರಾಂತಿಯ ಅಧ್ಯಕ್ಷ ದಂಪತಿಗಳನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಲಯನ್ ಜಾಕೆ ಮಾಧವ ಗೌಡ ಮತ್ತು ಲೀಲಾ ಮಾಧವ ಜಾಕೆ ಯವರು ನೆರವೇರಿದರು. ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಹಲವು ಸೇವಾ ಚಟುವಟಿಕೆಗಳನ್ನು ಮಾಡಲಾಯಿತು. ಅನಾರೋಗ್ಯದಿಂದ ಬಳಸುತ್ತಿರುವ ಕು. ನೂತನಳಿಗೆ ಕ್ಲಬ್ ವತಿಯಿಂದ ಧನ ಸಹಾಯ ನೀಡಲಾಯಿತು ಹಾಗೂ ಪೇರಳಕಟ್ಟೆ ಅಂಗನವಾಡಿ ಶಾಲೆಗೆ ಬಟ್ಟಲು ಸ್ಟ್ಯಾಂಡ್ ಕೊಡುಗೆ ನೀಡಲಾಯಿತು. ಕಾರ್ಯಕ್ರಮ ಸಂಯೋಜಕ ಲ. ಮೋಹನ್ ದಾಸ್ ಕೂಟಾಜೆ ಸ್ವಾಗತಿಸಿದರು. ಕಾರ್ಯದರ್ಶಿ ಕರುಣಾಕರ ಎಣ್ಣೆಮಜಲು ವರದಿ ವಚನ ನೀಡಿದರು. ಅತಿಥಿಗಳಾಗಿ ಪ್ರಾಂತೀಯ ರಾಯಭಾರಿ ಲ. ಜಯರಾಮ ದೇರಪ್ಪಜ್ಜನಮನೆ mjf, ವಲಯಾಧ್ಯಕ್ಷ ಲ. ದಿಲೀಪ್ ಬಾಬ್ಲುಬೆಟ್ಟು, ವಲಯ ಸಂಯೋಜಕರಾದ ಲ. ಡಾ. ಸಿದ್ದಲಿಂಗ ರವರು ಶುಭ ಹಾರೈಸಿದರು. ನಿಕಟಪೂರ್ವಾಧ್ಯಕ್ಷ ಲ.ಶಶಿಧರ ಪಳಂಗಾಯ ಮತ್ತು ಲ. ಪುರಂದರ ಪನ್ಯಾಡಿ ಸನ್ಮಾನಿತರನ್ನು ಪರಿಚಯಿಸಿದರು. ಲ.ಕುಮಾರಸ್ವಾಮಿ ಕಿನ್ನಿಕುಮೇರಿ ಪ್ರಾಂತೀಯ ಅಧ್ಯಕ್ಷರನ್ನು ಪರಿಚಯಿಸಿದರು. ಕೋಶಾಧಿಕಾರಿ ಲ. ವಾಸುದೇವ ಮೇಲ್ಪಾಡಿ ವಂದಿಸಿದರು.











