ಸುಳ್ಯದ ಸೈಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ಸಂಸತ್ತು ಅಧಿವೇಶನವು ಅ. 15 ರಂದು ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿಸ್ಟೆಲ್ಲಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಲಾ ನಾಯಕಿ ಅನಿಂದ್ರಿತ ಡಿ. ಎಸ್ 10ನೇ ತರಗತಿ ಸಂಪುಟ ಸದಸ್ಯರ ಕಾರ್ಯಚಟುವಟಿಕೆಗಳ ಬಗ್ಗೆ ಸದನಕ್ಕೆ ವಿವರಿಸಿದರು.















ಶಾಲಾ ಮಂತ್ರಿಮಂಡಲದ ಪ್ರತಿನಿಧಿಗಳು ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ವಾದ, ಪ್ರತಿವಾದ, ಚರ್ಚಾ ವಿಷಯಗಳನ್ನು ಪ್ರಖರವಾಗಿ ಮಂಡಿಸಿದರು.
ಅಧಿವೇಶನದ ಮುಖ್ಯ ಚರ್ಚಾ ವಿಷಯವಾಗಿ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಕೈಗೆತ್ತಿಕೊಂಡು ಅದರ ಸಾಧಕ – ಭಾದಕಗಳ ಬಗ್ಗೆ ಪರ – ವಿರೋಧ ಚರ್ಚೆ ನಡೆಸಿದರು.
ವಿದ್ಯಾರ್ಥಿಗಳಾದ ವಿಕಾಸ್.ಜಿ.ಕೆ 10ನೇ ತರಗತಿ ಸ್ವಾಗತಿಸಿ, ರಕ್ಷಣ್.ಕೆ 10ನೇ ತರಗತಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿನಿ ಪ್ರತೀಕ್ಷ.ಕೆ.ಜಿ 10 ನೇ ತರಗತಿ – ಸಭಾಧ್ಯಕ್ಷ, ಆಡಳಿತ ಹಾಗೂ ವಿರೋಧ ಪಕ್ಷದ ಮಹತ್ವವನ್ನು ತಿಳಿಸಿದರು. ಭುವಿ. ಜಿ. ರೈ 10 ನೇ ತರಗತಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕಿಯರಾದ ರೋಹಿಣಿ. ಟಿ ಹಾಗೂ ಜ್ಯೋತಿ. ಜೆ. ರೈ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.










