ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಇದರ ಕಾರ್ಯಾಲದಿಂದ ನಿಯಮ ೧೪(೩) ರಂತೆ ನೀಡಿದ ಚುನಾವಣಾ ನೋಟೀಸ್ ನಮೂನೆಯನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸಂಘದ ಉಪವಿಧಿ ಸಂಖ್ಯೆ-೧೬(III) ರಂತೆ ಸಂಘದ ಆಡಳಿತ ಮಂಡಲಿಗೆ ಚುನಾಯಿಸಬೇಕಾದ ಒಟ್ಟು ಸ್ಥಾನಗಳು- ೧೫, ಇವುಗಳಲ್ಲಿ ಸಾಮಾನ್ಯ ಸ್ಥಾನ-೦೯, ಪ.ಜಾತಿ ಸ್ಥಾನ-೦೧, ಪ.ಪಂಗಡ ಸ್ಥಾನ-೦೧, ಹಿಂದುಳಿದ ಪ್ರವರ್ಗ ‘ಎ’ ಸ್ಥಾನ-೦೧, ಮತ್ತು ಪ್ರವರ್ಗ ‘ಬಿ’ ಸ್ಥಾನ-೦೧, ಹಾಗು ಮಹಿಳಾ ಸ್ಥಾನ-೦೨ ಸ್ಥಾನಗಳಿಗೆ ಚುನಾವಣೆಯು ಸುಳ್ಯ ಗಾಂಧಿನಗರದಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನ. ೦೨ರಂದು ರವಿವಾರ ಪೂರ್ವಾಹ್ನ ಘಂಟೆ- ೦೯.೦೦ ರಿಂದ ಅಪರಾಹ್ನ ೦೪.೦೦ ಗಂಟೆವರೆಗೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ ಈ ಕೆಳಗಿನಂತಿದ್ದು ದಿನಾಂಕ :೨೧.೧೦.೨೦೨೫ ರಿಂದ ೨೫.೧೦.೨೦೨೫ ರ ಪೂರ್ವಾಹ್ನ ಗಂಟೆ ೧೧-೦೦ ರಿಂದ ಅಪರಾಹ್ನ ೦೧.೦೦ ಗಂಟೆವರೆಗೆ ರಿಟರ್ನಿಂಗ್ ಅಧಿಕಾರಿಯವರಿಗೆ/ಮುಖ್ಯಕಾರ್ಯನಿರ್ವಾಹಣಾಧಿಕಾರಿಗೆ ಸಂಘದ ಪ್ರಧಾನ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ.
ದಿನಾಂಕ : ೨೬.೧೦.೨೦೨೫ ರಂದು ಪೂರ್ವಾಹ್ನ ೧೧-೦೦ ಗಂಟೆಗೆ ರಿಟರ್ನಿಂಗ್ ಅಧಿಕಾರಿಯವರಿಂದ ಸಂಘದ ಪ್ರಧಾನ ಕಛೇರಿಯಲ್ಲಿ ಪರಿಶೀಲನೆ ನಡೆಯಲಿದೆ.
ದಿನಾಂಕ : ೨೭.೧೦.೨೦೨೫ ರಂದು ಅಪರಾಹ್ನ ೦೩-೦೦ ಗಂಟೆಯ ಒಳಗೆ ರಿಟರ್ನಿಂಗ್ ಅಧಿಕಾರಿಯವರಿಗೆ ಸಂಘದ ಪ್ರಧಾನ ಕಛೇರಿಯಲ್ಲಿ ನಾಮಪತ್ರ ವಾಪಾಸ್ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಧಾನ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಥವಾ ಸಂಘದ ಪ್ರಧಾನ ಕಛೇರಿಯ ಕಾರ್ಯಾವಧಿಯಲ್ಲಿ ಸಂಪರ್ಕಿಸಲು ಸೂಚಿಸಿದೆ.















ಪಡೆಯುವ ದಿನಾಂಕ
ಹೆಚ್ಚಿನ ಮಾಹಿತಿಗಾಗಿ ಸಂಘದ ಪ್ರಧಾನ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಥವಾ ಸಂಘದ ಪ್ರಧಾನ ಕಛೇರಿಯ ಕಾರ್ಯಾವಧಿಯಲ್ಲಿ ಸಂಪರ್ಕಿಸಲು ಸೂಚಿಸಿದೆ.



