














ಬೆಳ್ಳಾರೆಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹಳೆಯ ಅಂಬೇಡ್ಕರ್ ಭವನದ ಜಾಗದಲ್ಲಿ
ಸರ್ವೆ ಕಾರ್ಯವು ಅ.17 ರಂದು ನಡೆಯಿತು.
ತಾಲೂಕು ಸರ್ವೆಯರ್ ಜಗದೀಶ್ ಮತ್ತು ಸಹಾಯಕರಿಂದ ಸರ್ವೆ ಕಾರ್ಯ ನಡೆಯಿತು.

90-1b1 ಸರ್ವೆ ಸಂಖ್ಯೆಯ ಈ ಜಾಗವು ಸುಮಾರು 7 ಸೆನ್ಸ್ ರಷ್ಟಿದೆ ಎಂದು ಸರ್ವೆಯಲ್ಲಿ ತಿಳಿದು ಬಂತೆನ್ನಲಾಗಿದೆ.
.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕರಾದ(ಮೈಸೂರು ವಿಭಾಗ)ಆನಂದ ಬೆಳ್ಳಾರೆಯವರ ಸತತ ಪ್ರಯತ್ನದಿಂದಾಗಿ ಇದೀಗ ಬೆಳ್ಳಾರೆಯಲ್ಲಿ ನೂತನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ವೆ ಕಾರ್ಯ ನಡೆಯಿತು.

ಸರ್ವೆಯ ಸಂದರ್ಭ ಸ್ಥಳದಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಕೃಷ್ಣ,ಸಹಾಯಕರಾದ ಪ್ರವೀಣ್,ಬೆಳ್ಳಾರೆ ಪಿ.ಡಿ.ಒ ಪ್ರವೀಣ್ ಕುಮಾರ್ ,ಗ್ರಾಮ ಆಡಳಿತಾಧಿಕಾರಿ ಅಜಯ್,ಸಹಾಯಕರಾದ ಯತೀಶ್,ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯರಾದ ಚಂದ್ರಶೇಖರ್ ಪನ್ನೆ,ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ಮಣಿಕಂಠ,ದ.ಸಂ.ಸ ಮುಖಂಡರಾದ ಅಚ್ಚುತ ಮಲ್ಕಜೆ,ವಿಶ್ವನಾಥ್ ಅಲೆಕ್ಕಾಡಿ,ಕುಮಾರ್ ಪಂಜ,ಜಯರಾಮ ಉಮಿಕ್ಕಳ,ಪ್ರೇಮಚಂದ್ರ,ಸುನಿಲ್ ರೈ ಪುಡ್ಕಜೆ,ರಜಾಕ್ ಪನ್ನೆ ಮತ್ತಿತರರು ಹಾಜರಿದ್ದರು.










