ಬೆಳ್ಳಾರೆಯ ಮುಖ್ಯ ರಸ್ತೆ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ಶರತ್ ಕಿಲಂಗೋಡಿಯವರ ಮಾಲಕತ್ವದ ಫ್ಯಾಶನ್ ಅಡ್ಡ ಮೆನ್ಸ್ ವೇರ್ ಅ.17 ರಂದು ಶುಭಾರಂಭಗೊಂಡಿತು.
















ವಿಧಾನ ಪರಿಷತ್ ಮಾಜಿ ಸದಸ್ಯ ,ಹಿರಿಯರಾದ ಅಣ್ಣಾ ವಿನಯಚಂದ್ರ ರವರು ದೀಪ ಬೆಳಗಿಸಿ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭಹಾರೈಸಿದರು.
ಬೆಳಿಗ್ಗೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಉದಯ ಕುಮಾರ್ ಕೆ.ಟಿ. ಗಣಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೊರಗಪ್ಪ ಪೂಜಾರಿ ಕಿಲಂಗೋಡಿ,ಶ್ರೀಮತಿ ಲೀಲಾವತಿ, ಚಂದ್ರಶೇಖರ ಕಾಮತ್ ,ಪದ್ಮನಾಭ ಬೀಡು,ಎನ್.ಎಸ್.ಡಿ.ವಿಠಲದಾಸ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.










