ಸುಳ್ಯ ನಾವೂರು ನಿವಾಸಿ ಅಂದುಂಞಿ ಕುತ್ತಮೊಟ್ಟೆ ಯವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.18ರಂದು ಸಂಜೆ ನಿಧನರಾದರು. ಅವರಿಗೆ ಸುಮಾರು 76 ವರ್ಷ ವಯಸ್ಸಾಗಿತ್ತು.















ಕೃಷಿಕರಾಗಿದ್ದ ಅಂದುಂಞಿಯವರು ಉಬರಡ್ಕದ ಕುತ್ತಮೊಟ್ಟೆಯಲ್ಲಿ ಈ ಹಿಂದೆ ಅಂಗಡಿ ನಡೆಸುತ್ತಿದ್ದರು.
ಮೃತರು ಪತ್ನಿ ಖದೀಜ, ಪುತ್ರ ಮಂಗಳೂರಿನಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿರುವ ಮಹಮ್ಮದ್ ಶರೀಫ್ ಕುತ್ತಮೊಟ್ಟೆ, ಪುತ್ರಿಯರಾದ ಆಯಿಷಾ, ತಾಹಿರಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.










