ಸುದ್ದಿಯಿಂದ ದೀಪಾವಳಿ ಬಲಿಯೇಂದ್ರ ಅಲಂಕಾರ ಸ್ಪರ್ಧೆ

0

ನೋಂದಣಿಗೆ ನಾಳೆ ಕೊನೆಯ ದಿನ

ನಾಡು ದೀಪಾವಳಿಯ ಸಂಭ್ರಮ ಸಡಗರದಲ್ಲಿದೆ. ದೀಪಾವಳಿ ನಮ್ಮ ಸಾಂಪ್ರದಾಯಿಕ ಹಬ್ಬ. ತುಳುನಾಡಿನಲ್ಲಿ ವಿಶೇಷವಾಗಿ ಬಲೀಂದ್ರನನ್ನು ಸ್ವಾಗತಿಸಿ ಆರಾಧಿಸುವ ವಿಶೇಷ ಆಚರಣೆ ಇದು. ದೀಪಾವಳಿಯ ಮೂರನೆಯ ದಿನ ಬಲೀಂದ್ರನ ಪೂಜೆ ನಡೆಸಲಾಗುತ್ತದೆ. ಬಲೀಂದ್ರನನ್ನು ಸಾಂಪ್ರದಾಯಿಕವಾಗಿ ವಿಶೇಷವಾಗಿ ಅಲಂಕಾರ ಮಾಡುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಲೀಂದ್ರ ನೆಡುವ ಸಂಪ್ರದಾಯ ಮರೆಯಾಗುತ್ತಿದೆ. ಇಂತಹ ಆಚರಣೆಗಳು ನೆನಪುಗಳಷ್ಟೇ ಆಗಿ ಉಳಿಯುತ್ತಿದೆ. ಹಾಗಾಗಿ ಇವುಗಳ ದಾಖಲೀಕರಣ ಅಗತ್ಯ. ಸುದ್ದಿ ಚಾನೆಲ್ ಈ ಬಾರಿಯ ದೀಪಾವಳಿಗೆ ಬಲೀಂದ್ರ ಅಲಂಕಾರ ಸ್ಪರ್ಧೆ ನಡೆಸುತ್ತಿದೆ. ಸಂಪ್ರದಾಯ ಬದ್ಧವಾಗಿ ಬಲೀಂದ್ರನನ್ನು ಅಲಂಕರಿಸುವ ಮನೆಯವರು ಈ ಸ್ಪರ್ಧೆಗೆ ನೋಂದಣಿ ಮಾಡಿಕೊಳ್ಳಬಹುದು.

ಬಲೀಂದ್ರ ಪೂಜೆಯ ಮರು ದಿನ ನಿರ್ಣಾಯಕರ ತಂಡ ಆಯ್ದ ಮನೆಗಳಿಗೆ ಭೇಟಿ ನೀಡಿ ಮೌಲ್ಯ ಮಾಪನ ನಡೆಸಲಿದೆ. ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೆ ಪ್ರಮಾಣಪತ್ರ ನೀಡಲಾಗುವುದು. ಎಲ್ಲ ಬಲೀಂದ್ರ ಗಳನ್ನೂ ಚಿತ್ರೀಕರಿಸಿ ಮನೆಯವರ ಮಾಹಿತಿಯೊಂದಿಗೆ ಪ್ರಸಾರ ಮಾಡಲಾಗುವುದು.

ಸ್ಪರ್ಧೆಯ ಸಂಯೋಜನೆಯ ದೃಷ್ಟಿಯಿಂದ ಸೀಮಿತ ಮನೆಗಳಿಗೆ ಮಾತ್ರ ಭೇಟಿ ನೀಡಲು ಸಾಧ್ಯವಾಗುತ್ತದೆ. ಹಾಗಾಗಿ ಆಯ್ದ ಮನೆಗಳಿಗೆ ಮಾತ್ರ ಈ ವರ್ಷ ಭೇಟಿ ನೀಡಲಾಗುತ್ತದೆ. ಸುಳ್ಯ ನಗರದಿಂದ ಮನೆ ಗರಿಷ್ಠ 20 ಕಿ.ಮೀ. ದೂರವಿರಬೇಕು. ಮುಖ್ಯ ರಸ್ತೆಯಿಂದ ಮನೆಯವರೆಗೆ ವಾಹನ ಹೋಗುವಂತಹ ರಸ್ತೆ ಇರಬೇಕು.

ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಇರುವ ಮನೆಯವರು ಸೋಮವಾರ ಮಧ್ಯಾಹ್ನ ಒಳಗೆ 94810 91949 ವಾಟ್ಸಾಪ್‌ ನಂಬರ್ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ಕಳುಹಿಸಬೇಕು. ಸುದ್ದಿ ತಂಡ ಭೇಟಿ ನೀಡುವ ಮನೆಯವರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9901288280 ಸಂಪರ್ಕಿಸಬಹುದು.