ಅಪಘಾತ ಹಾಗೂ ಆರೋಗ್ಯ ವಿಮೆ ಶಿಬಿರ ವು ಮುರುಳ್ಯ ಎಣ್ಮೂರು ಸೊಸೈಟಿಯ ವಾಣಿಜ್ಯ ಸಂಕೀರ್ಣ ದಲ್ಲಿ ಎಣ್ಮೂರು ಕೋಟಿ ಚೆನ್ನಯ್ಯ ಫ್ರೆಂಡ್ಸ್ ಕ್ಲಬ್ ಮತ್ತು ಗ್ರಾಮ ಒನ್ ನಿಂತಿಕಲ್ಲು ಇದರ ಸಹ ಯೋಗದಲ್ಲಿ ಅ. 17 ಮತ್ತು 18 ರಂದು ನಡೆಯಿತು. ಕ್ಲಬ್ ಉಪಾಧ್ಯಕ್ಷ ಸುಂದರ ದರ್ಖಾಸ್ತು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕ್ಲಬ್ ಸದಸ್ಯರು, ಸೊಸೈಟಿ ಸಿಬ್ಬಂದಿ ಸುದೀನ್ ಕುಮಾರ್ ರೈ, ರವಿ ವರ್ಮಾ ಎ, ಫಲಾನುಭವಿಗಳು, ಉಪಸ್ಥಿತರಿದ್ದರು. ಪ್ರದೀಪ್ ರೈ ಸ್ವಾಗತಿಸಿದರು ಸುದರ್ಶನ್ ಡಿ ವಂದಿಸಿದರು.


























