ಐವರ್ನಾಡು : ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದ ಬಟ್ಟೆ ಅಂಗಡಿಯವರ ವಿರುದ್ಧ ಪೊಲೀಸ್ ದೂರು

0

ಐವರ್ನಾಡು ಗ್ರಾಮದ ಬೇಂಗಮಲೆಯಲ್ಲಿ ತ್ಯಾಜ್ಯ ಎಸೆದ ಸುಳ್ಯದ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ಸ್ ಜೆರ್ಸಿ ಗಾಂಧಿನಗರ ಇವರ ವಿರುದ್ದ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ದೂರು ನೀಡಲಾಗಿದೆ.

ಅ.15 ರಂದು ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಂಗಮಲೆಯಲ್ಲಿ 3 ಕಡೆಗಳಲ್ಲಿ ತ್ಯಾಜ್ಯ ಎಸೆದಿರುವುದು ಕಂಡು ಬಂದಿದ್ದು ಈ ಮೂರು ತ್ಯಾಜ್ಯ ತುಂಬಿದ ಬ್ಯಾಗಗಳನ್ನು ಪರಿಶೀಲಿಸಿದಾಗ 3 ತ್ಯಾಜ್ಯ ತುಂಬಿದ ಬ್ಯಾಗ್ ಗಳು ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ಸ್ ಜೆರ್ಸಿ ಗಾಂಧಿನಗರ ಸುಳ್ಯ ಎಂಬ ವಸ್ತ್ರ ಮಳಿಗೆಗೆ ಸೇರಿದ ತ್ಯಾಜ್ಯಗಳಿರುವುದು ಕಂಡು ಬಂದಿರುತ್ತದೆ.


ಚೀಲಗಳಲ್ಲಿ ವಸ್ತ್ರ ಮಳಿಗೆಗೆ ಸಂಬಂಧಿಸಿದ ಹಲವು ಬಿಲ್ಲುಗಳು,ಮಳಿಗೆಯ ಹೆಸರಿಗೆ ನೀಡಲಾದ ಜಾತ್ರೆಯ ಆಮಂತ್ರಣಗಳು ಹಾಗೂ ಮಳಿಗೆಯ ವಿದ್ಯುತ್ ಸಂಪರ್ಕದ ಮೆಸ್ಕಾಂ ಬಿಲ್ಲು ಲಭಿಸಿದ್ದು ತ್ಯಾಜ್ಯಗಳು ಕೂಡ ವಸ್ತ್ರ ಮಳಿಗೆಯದ್ದೆಂದು ಕಂಡು ಬಂದಿರುತ್ತದೆ. ಮೂರು ತ್ಯಾಜ್ಯದ ಬ್ಯಾಗ್ ಗಳನ್ನು ಎರಡು ಮೂರು ದಿನಗಳ ಅಂತರದಲ್ಲಿ ಒಂದು ವಾರದೊಳಗೆ 3 ಗೋಣಿಯನ್ನು ಬೇಂಗಮಲೆಯಲ್ಲಿ ಅಲ್ಲಲ್ಲಿ ಬಿಸಾಡಿರುತ್ತಾರೆ ಹಾಗೂ ಈ ಬಗ್ಗೆ ಅಂಗಡಿ ಮಾಲಿಕರಿಗೆ ಕರೆ ಮಾಡಿ ದಂಡ ಪಾವತಿಸುವಂತೆ ಪಂಚಾಯತ್ ನಿಂದ ಸೂಚಿಸಿದ್ದು ಅಂಗಡಿ ಮಾಲಿಕರು ದಂಡ ಪಾವತಿಸಲು ನಿರಾಕರಿಸಿರುವುದಾಗಿ ತಿಳಿದು ಬಂದಿದೆ. ಅದೇ ದಿನ ರಾತ್ರಿ ತಾನು ಎಸೆದ ಮೂರು ಗೋಣಿ ಚೀಲದ ತ್ಯಾಜ್ಯವನ್ನು ಪುನಃ ಅವರು ಬೇಂಗಮಲೆಗೆ ಬಂದು ತೆಗೆದುಕೊಂಡು ಹೋಗಿದ್ದು ಹೋಗಿರುವುದಾಗಿ ತಿಳಿದು ಬಂದಿದೆ.


ಈ ಬಗ್ಗೆ ಐವರ್ನಾಡು ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ರವರು ಅ.17 ರಂದು ತ್ಯಾಜ್ಯ ಎಸೆದ ಅಯೋಧ್ಯಾ ಮೆನ್ಸ್ ಡ್ರೆಸ್ & ಸ್ಪೋಟ್ಸ್ ಜೆರ್ಸಿ ಗಾಂಧಿನಗರ ಇವರು ದಂಡ ಕಟ್ಟಲು ನಿರಾಕರಣೆಯ ಬಗ್ಗೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.