ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿ ಆಚರಣೆ

0

ಸುಳ್ಯ ದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನು ಅ.18 ರಂದು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುನಂದ ಶೆಟ್ಟಿ ಆಗಮಿಸಿದ್ದರು. ಸಂಸ್ಥೆಯ ಜೊತೆ ಕಾರ್ಯದರ್ಶಿಯಾದ ವಂದನೀಯ ಫಾದರ್ ಓಲ್ವಿ ನ್ ಎಡ್ವರ್ಡ್ ಡಿ ಕುನ್ಹ, ಪೂರ್ವ ಪ್ರಾಥಮಿಕ ಪಿಟಿಎ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್, ಪ್ರಾಥಮಿಕ ವಿಭಾಗದ ಪಿ ಟಿ ಎ ಉಪಾಧ್ಯಕ್ಷೆಯಾದ ಶ್ರೀಮತಿ ಸುನಿತಾ ಮೊಂತೆರೊ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಸಂಸ್ಥೆಯ ಜತೆ ಕಾರ್ಯದರ್ಶಿ ವಂದನೀಯ ಗುರುಗಳು ದೀಪ ಬೆಳಗಿಸುವುದರ ಮೂಲಕ ದೀಪಾವಳಿ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ಎರಡನೇ ತರಗತಿ ವಿದ್ಯಾರ್ಥಿ ಲಗನ್ ಪ್ರಸಾದ್ ದೀಪಾವಳಿ ಬಗ್ಗೆ ಕಿರು ಭಾಷಣವನ್ನು ಮಾಡಿದನು. ನಂತರ ಹಬ್ಬದ ಪ್ರಯುಕ್ತ ಏರ್ಪಡಿಸಿದ ತರಗತಿವಾರು ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ಮುಖ್ಯ ಅತಿಥಿಯಾದ ಶ್ರೀಮತಿ ಸುನಂದ ಶೆಟ್ಟಿ ದೀಪಾವಳಿಯ ಮೂರು ದಿನಗಳ ಪ್ರಾಮುಖ್ಯತೆಯನ್ನು ಕುರಿತು ಮಾತನಾಡಿದರು. ನಂತರ ವಿದ್ಯಾರ್ಥಿಗಳು ದೀಪಾವಳಿ ಸಮೂಹ ಗೀತೆಯನ್ನು ಹಾಡಿದರು. ಪೂರ್ವ ಪ್ರಾಥಮಿಕ ವಿಭಾಗದ ಪಿಟಿಎ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ವಿದ್ಯಾರ್ಥಿಗಳಿಗೆ ದೀಪಾವಳಿಯ ಶುಭಾಶಯ ಕೋರಿದರು. ಮುಖ್ಯೋಪಾಧ್ಯಾಯನಿ ಸಿಸ್ಟರ್ ಮೇರಿ ಸ್ಟೆಲ್ಲಾ ದೀಪಾವಳಿ ಪ್ರಯುಕ್ತ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಜೊತೆ ಕಾರ್ಯದರ್ಶಿ ವಂದನೀಯ ಫಾದರ್ ಒಲ್ವಿನ್ ಎಡ್ವರ್ಡ್ ಡಿ ಕುನ್ಹ ದೀಪಾವಳಿ ಹಬ್ಬದ ಕುರಿತು ಮಾತನಾಡಿ ಎಲ್ಲರಿಗೂ ಶುಭ ಆಶೀರ್ವದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಯುಕೆಜಿ, ಎರಡನೇ ಮತ್ತು ಏಳನೇ ತರಗತಿಯ ವಿದ್ಯಾರ್ಥಿಗಳಿಂದ ದೀಪಾವಳಿ ಸಮೂಹ ನೃತ್ಯ ಮೂಡಿ ಬಂದವು.


ಕಾರ್ಯಕ್ರಮಕ್ಕೆ ಏಳನೇ ತರಗತಿ ವಿದ್ಯಾರ್ಥಿ ರುಶಿಕ್ ಕುಮಾರ್ ಸ್ವಾಗತಿಸಿ, ಅದೇ ತರಗತಿಯ ಪ್ರಮೀತ್ ಜೆ ಕೆ ರೈ ವಂದಿಸಿದರು. ಎರಡನೇ ತರಗತಿ ವಿದ್ಯಾರ್ಥಿಗಳಾದ ಅಂಶಲ್ ಬಿಳಿನೆಲೆ, ಸಮನ್ಯು ಕೆ ಎಂ, ಫಾತಿಮಾತ್ ರಸ್ವಾನ, ಝಯಿನಬ್ ಕಾರ್ಯಕ್ರಮ ನಿರೂಪಿಸಿದರು.
ಸಹ ಶಿಕ್ಷಕಿಯರಾದ ಶ್ರೀಮತಿ ಭಾರತಿ, ಶ್ರೀಮತಿ ಜ್ಯೋತಿ, ಶ್ರೀಮತಿ ಸುಮತಿ, ಶ್ರೀಮತಿ ಕವಿತಾ, ಶ್ರೀಮತಿ ಮಮತಾ ಇವರೆಲ್ಲರ ಸಹಭಾಗಿತ್ವದಲ್ಲಿ ಎಲ್ಲ ಬೋಧಕ ಹಾಗೂ ಬೋಧಕೇತರ ವೃಂದದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.