ಸುಳ್ಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವೈಟ್ ಲಿಪ್ಟಿಂಗ್ ಚಾಂಪಿಯನ್ ಶಿಪ್ ಪಂದ್ಯಾಕೂಟವು ಯುವಜನ ಸಂಯುಕ್ತ ಮಂಡಳಿಯ ಎದುರಿನ ಮೈದಾನದಲ್ಲಿ ನಡೆಯಲಿದ್ದು ಕ್ರೀಡಾಂಗಣ ಸಿದ್ಧತೆಯ ಗುದ್ದಲಿ ಪೂಜೆಯು ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅ. 21 ರಂದು ನೆರವೇರಿತು.
















ಸುಳ್ಯ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಸೋಸಿಯೇಷನ್ ಕ್ಲಬ್ಇದರಆಯೋಜನೆಯಲ್ಲಿ ನ. 7,8 ಮತ್ತು 9 ರಂದು ನಡೆಯಲಿರುವ ಪಂದ್ಯಾಕೂಟದ ಕ್ರೀಡಾಂಗಣದ ಸಿದ್ದತೆಗಾಗಿ ಗುದ್ದಲಿ ಪೂಜೆಯನ್ನು ಗೌರವ ಸಲಹೆಗಾರರಾದ ಎನ್. ಎ ರಾಮಚಂದ್ರ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ರಾಧಾಕೃಷ್ಣ ಮಣಿಬೆಟ್ಟು, ಸಮಿತಿಯ ಕೋಶಾಧಿಕಾರಿ ಅಶೋಕ ಪ್ರಭುಸುಳ್ಯ,ತರಬೇತುದಾರಾದ ರಮೇಶ್, ಜಿ. ಜಿ. ನಾಯಕ್ ಹಾಗೂ ಸಮಿತಿಯ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.










