ಸುಳ್ಯದಲ್ಲಿ ಜಲಜೀವನ್ ಮಿಷನ್ ಕಾಮಗಾರಿಯಿಂದಾಗಿ ಹಾಳಾದ ರಸ್ತೆಯನ್ನು ಶೀಘ್ರವಾಗಿ ದುರಸ್ತಿಪಡಿಸುವಂತೆ ಜಿಲ್ಲಾಧಿಕಾರಿಗೆ ಎಸ್‌ಡಿಪಿಐ ಮನವಿ

0

ಸುಳ್ಯ ನಗರದ ಅಮೃತ್ 2.0 ಯೋಜನೆ ಕುಡಿಯುವ ನೀರಿನ ಯೋಜನೆಗಾಗಿ ನಗರದ ಕಲ್ಲು ಮುಟ್ಲು ವಾಟರ್ ಟ್ಯಾಂಕ್ ರಸ್ತೆಯಿಂದ ಆರಂಭವಾಗಿ ಸುಳ್ಯದ ನಗರದ ಜನನಿಬಿಡ ಪ್ರದೇಶಗಳಲ್ಲಿ ಪೈಪ್ಲೈನ್ ಕಾಮಗಾರಿಗೆ ಬೇಕಾಗಿ, ಹಲವಾರು ಕಾಂಕ್ರೀಟ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ಕತ್ತರಿಸಿ ರಸ್ತೆಯನ್ನು ಹಾಳು ಮಾಡಿದ್ದಾರೆ.
ಬೃಹತ್ ಗಾತ್ರದ ಪೈಪುಗಳನ್ನು ಅಳವಡಿಸಿದ ಗುತ್ತಿಗೆದಾರರು ರಸ್ತೆಯನ್ನು ಸರಿಪಡಿಸದೆ ಹಲವಾರು ತಿಂಗಳುಗಳಿಂದ ಹಾಗೆಯೇ ಬಿಟ್ಟಿರುವುದರಿಂದ ನಗರದಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್, ಹಲವಾರು ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ನಗರದ ರಸ್ತೆಗಳನ್ನು ಶೀಘ್ರವಾಗಿ ದುರಸ್ತಿಗೊಳಿಸಿ ಸಂಚಾರ ಯೋಗ್ಯವನ್ನಾಗಿಸಲು ತುರ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಮೀರಝ್ ಸುಳ್ಯ ರವರ ನೇತೃತ್ವದಲ್ಲಿ ದ.ಕ ಜಿಲ್ಲಾಧಿಕಾರಿ ಯವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.
ನಿಯೋಗದಲ್ಲಿ ಎಸ್‌ಡಿಪಿಐ ಸುಳ್ಯ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಸಿ.ಎ ಸಮಿತಿ ಸದಸ್ಯರಾದ ಸಿದ್ದೀಕ್ ಕೋಡಿಯಮ್ಮೆ ಉಪಸ್ಥಿತರಿದ್ದರು.