ಎಣ್ಮೂರು ಶ್ರೀ ಕೋಟಿ ಚೆನ್ನಯ್ಯ ಗರಡಿಯಲ್ಲಿ ದೀಪಾವಳಿ ಆಚರಣೆ ತಂಬಿಲ ಸೇವೆ

0

ಇತಿಹಾಸ ಪ್ರಸಿದ್ದ ಎಣ್ಮೂರು ಶ್ರೀ ಆದೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದೀ ಬೈದರುಗಳ ಗರಡಿ ಯಲ್ಲಿ ದೀಪಾವಳಿ ಸಂಭ್ರಮ, ಬಲಿಯೇಂದ್ರ ಪೂಜೆ,, ತಂಬಿಲ ಸೇವೆ, ದರ್ಶನ ಸೇವೆ, ಹರಿಕೆ ತಂಬಿಲ ಸೇವೆ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಗರಡಿ ಅನುವಂಶಿಕ ಆಡಳ್ತೇದಾರ ಕಟ್ಟಬೀಡು ರಾಮಕೃಷ್ಣ ಶೆಟ್ಟಿ, ಶ್ರೀಮತಿ ಪದ್ಮ ಆರ್ ಶೆಟ್ಟಿ, ಪಂಜಿಮೊಗರು ಗುತ್ತು ರಘುನಾಥ ರೈ,, ಅಲೆಂಗಾರ ಗುತ್ತು ರಘು ನಾಥ ರೈ, ನ್ಯಾಯ ವಾದಿ ರಾಧಾಕೃಷ್ಣ ರೈ ಕಟ್ಟಬೀಡು,, ಗರಡಿ ಮಾಹಿತಿದಾರ ಮತ್ತು ಕೇರ್ಪಡ ಶ್ರೀ ಮಹಿಷ ದೇವಸ್ಥಾನದ ವ್ಯವಸ್ಥಾನಸಮಿತಿ ಅಧ್ಯಕ್ಷರು ಎನ್ ಜಿ ಲೋಕನಾಥ ರೈ ಪಟ್ಟೆ, ಕಟ್ಟಬೀಡು ಕುತುಂಬಸ್ಥರು, ಬಾಕಿಲ ಗುತ್ತು ಬೈದರು ಗಳ ಗರಡಿಯ ದರ್ಶನ ಪಾತ್ರಿಗಳಾದ ಶೈಲೇಶ್ ಅಗತಾಡಿ ಲೋಹಿತ್ ಬಾಕಿಲ ಗುತ್ತು, ಸ್ಥಳೀಯ ಮತ್ತು ಪರ ಊರ ಭಕ್ತ ಜನರು ಉಪಸ್ಥಿತರಿದ್ದರು.