ಕಲ್ಲುಗುಂಡಿ : ಖುಷಿ ಬ್ಯೂಟಿ ಪಾರ್ಲರ್ & ಟೈಲರಿಂಗ್ ತರಬೇತಿ ಕೇಂದ್ರದಲ್ಲಿ ಧನ ಲಕ್ಷ್ಮೀ ಪೂಜೆ ಹಾಗೂ ಟೈಲರಿಂಗ್ ಕಲಿಕಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

0

ಕಲ್ಲುಗುಂಡಿ ವಾಣಿಜ್ಯ ಸಂಕೀರ್ಣ ಕೂಲಿಷೆಡ್ ನಲ್ಲಿರುವ ಖುಷಿ ಬ್ಯೂಟಿ ಪಾರ್ಲರ್ & ಟೈಲರಿಂಗ್ ತರಬೇತಿ ಕೇಂದ್ರದಲ್ಲಿ ಧನ ಲಕ್ಷ್ಮೀ ಪೂಜೆ ಹಾಗೂ 20 ಟೈಲರಿಂಗ್ ಕಲಿಕಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಅ.21ರಂದು ನಡೆಯಿತು.

ಧನ ಲಕ್ಷ್ಮೀ ಪೂಜೆಯನ್ನು ಪುರೋಹಿತ ಅಂಬರೀಶ್ ಭಟ್ ನೆರವೇರಿಸಿ ದೇವಿಯ ಕೃಪೆಗೆ ಪಾತ್ರರಾದರು. ಪ್ರಸಾದ ವಿತರಣೆ ನಡೆದ ಬಳಿಕ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮಾದೇವಿ ಬಾಲಚಂದ್ರ ಕಳಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ಬಳಿಕ ಟೈಲರಿಂಗ್ ಪೂರೈಸಿದ 20 ವಿದ್ಯಾರ್ಥಿಗಳಾದ ಸುಕುಮಾರಿ ,ಗೋಪಿ, ಜಸ್ಮಿತಾ, ಲಾವಣ್ಯ , ಮಧುಶ್ರೀ, ಲೀಲಾವತಿ , ಮಧುಶ್ರೀ ಎಂ, ರಶ್ಮಿ ಕೆ.ಎಸ್, ಸಂಶೀನಾ ಕೆ.ಎಂ, ಲಾವಣ್ಯ ಏ.ಸಿ, ಪ್ರೇಮಾ ಡಿ, ಕಾವ್ಯ ಪಿ, ವನಿತ ಡಿ, ನಯನ, ರಾಗಿಣಿ ಎಸ್.ಎಲ್,ರಮ್ಯಾ ಬಿ. ಸಿ, ರಹೀಮತ್ ಬೀಬಿ, ಪವಿತ್ರ ಕೆ, ಕಾವ್ಯಶ್ರೀ, ಕಾವ್ಯ ಇವರಿಗೆ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಬಳಿಕ ವಿಧ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಹೇಳಿದರು. ಈ ವೇಳೆ ಸಂಸ್ಥೆಯ ಮಾಲೀಕರಾದ ಕುಸುಮಾ ಕೇಶವ ಬಂಗ್ಲೆಗುಡ್ಡೆ ಕಲ್ಲುಗುಂಡಿ , ಫಾತಿಮತ್ ಝೌರಾ , ಗೀತಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕು.ಖುಷಿ ಪ್ರಾರ್ಥಿಸಿ , ಸಂಸ್ಥೆ ಮಾಲಕರಾದ ಕುಸುಮಾ ಕೇಶವ ಬಂಗ್ಲೆಗುಡ್ಡೆ ಸ್ವಾಗತಿಸಿ , ವಂದಿಸಿದರು.