ಸುಳ್ಯ ರೆಡ್ ಕ್ರಾಸ್ ಸಂಸ್ಥೆಗೆ ದ.ಕ. ಜಿಲ್ಲಾಮಟ್ಟದ ಅತ್ಯುತ್ತಮ ತಾಲೂಕು ಘಟಕ ಪ್ರಶಸ್ತಿ

0

ಪ್ರಶಸ್ತಿ ನೀಡಿ ಗೌರವಿಸಿದ ಜಿಲ್ಲಾಧಿಕಾರಿ

ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಸಂಸ್ಥೆಯಿಂದ ಸುಳ್ಯದ ರೆಡ್ ಕ್ರಾಸ್ ಸಂಸ್ಥೆಗೆ 2023 – 24 ಹಾಗೂ 25 ನೇ ಸಾಲಿನ ಅತ್ಯುತ್ತಮ ತಾಲೂಕು ಘಟಕ ಪ್ರಶಸ್ತಿ ನೀಡಿ ಗೌರವಿಸಿದೆ.

ಮಂಗಳೂರಿನ ಭಾರತೀಯ ರೆಡ್ ಕ್ರಾಸ್ ಘಟಕದ ರೆಡ್ ಕ್ರಾಸ್ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಾಸಭೆಯಲ್ಲಿ 14/10/2025 ರಂದು ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.


ಸಮಿತಿಯ ಅಧ್ಯಕ್ಷರಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ರವರು ಸನ್ಮಾನವನ್ನು ನೀಡಿ ಗೌರವಿಸಿದರು.
ಕಳೆದ ಮೂರು ವರ್ಷಗಳಿಂದ ಸಂಸ್ಥೆಯು ಮಾಡುತ್ತಿರುವ ಉತ್ತಮ ಸಮಾಜ ಸೇವೆ ಹಾಗೂ ಕಾರ್ಯ ಚಟುವಟಿಕೆಯನ್ನು ಗುರುತಿಸಿ ಈ ಸನ್ಮಾನಕ್ಕೆ ಭಾಜನವಾಗಿದೆ. ಸುಳ್ಯ ಘಟಕ ಕಳೆದ ವರ್ಷದಲ್ಲಿ 17 ರಕ್ತದಾನ ಶಿಬಿರ ಹಾಗೂ ಇತರ ಸಮಾಜಮುಖಿ 46 ಕಾರ್ಯಕ್ರಮಗಳನ್ನು ಮಾಡಿ ಈ ಪ್ರಶಸ್ತಿಗೆ ಬಾಜನವಾಗಿದೆ.


ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಇದರ ರಾಜ್ಯ ಘಟಕದ ಸಭಾಪತಿ ರಾಜೀವ್ ಶೆಟ್ಟಿ , ಜಿಲ್ಲಾ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್, ಜಿಲ್ಲಾ ರೆಡ್ ಕ್ರಾಸಿನ ಸಭಾಪತಿಗಳಾದ ಶಾಂತರಾಮ ಶೆಟ್ಟಿ, ಭಾರತೀಯ ರೆಡ್ ಕ್ರಾಸ್ ಸುಳ್ಯ ಘಟಕದ ಸಭಾಪತಿ ರಕ್ತದಾನಿ ಪಿ ಬಿ ಸುಧಾಕರ್ ರೈ, ಸುಳ್ಯ ತಾಲೂಕಿನ ಜಿಲ್ಲಾ ಪ್ರತಿನಿಧಿ ಸಿಎ ಗಣೇಶ್ ಭಟ್, ತಾಲೂಕು ಘಟಕದ ಖಜಾಂಜಿ ವಿನಯ್ ಕುಮಾರ್, ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು….
2018ನೇ ಸಾಲಿನಲ್ಲಿ ರಕ್ತದಾನಿ ಪಿ ಬಿ ಸುಧಾಕರ್ ರೈ ಭಾರತೀಯ ರೆಡ್ ಕ್ರಾಸ್ ರಾಜ್ಯ ಘಟಕದ ವತಿಯಿಂದ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದರು.