ಪೆರಾಜೆ ಜ್ಯೋತಿ ಅನುದಾನಿತ ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ & ಸ್ಮಾರ್ಟ್ ಕ್ಲಾಸ್‌ರೂಮ್ ಉದ್ಘಾಟನೆ

0

ರಾಂಬಸ್ ಚಿಪ್ ಟೆಕ್ನಾಲಜೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಹಾಗೂ ಪ್ರಣವ್ ಫೌಂಡೇಶನ್ ಸಹಕಾರ

ಪೆರಾಜೆ ಜ್ಯೋತಿ ಅನುದಾನಿತ ಪ್ರೌಢಶಾಲೆಯಲ್ಲಿ ಪ್ರಣವ್ ಫೌಂಡೇಶನ್ (ರಿ.) ಇದರ ಸಹಕಾರದೊಂದಿಗೆ ಬೆಂಗಳೂರಿನ ಪ್ರತಿಷ್ಠಿತ ರಾಂಬಸ್ ಚಿಪ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಕೊಡುಗೆಯಿಂದ ನಿರ್ಮಾಣಗೊಂಡಿರುವ ಕಂಪ್ಯೂಟರ್ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನಾ ಸಮಾರಂಭ ಅ.24ರಂದು ನಡೆಯಿತು.

ನೂತನ ಕೊಠಡಿಯನ್ನು ರಾಂಬಸ್ ಚಿಪ್ ಟೆಕ್ನಾಲಜಿ ಸಂಸ್ಥೆಯ ಸದಸ್ಯರಾದ ಅಯ್ಯನ್ನಾಚಕ್ಕರೆ ತಮ್ಮಯ್ಯ ರವರು ಉದ್ಘಾಟಿಸಿ ಈ ಯೋಜನೆಯನ್ನು ಫಲಾನುಭವಿಗಳಾದ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಬಳಸಿಕೊಂಡು ಕಂಪ್ಯೂಟರ್ ಜ್ಞಾನದೊಂದಿಗೆ ಪಾಠ ಕಲಿಕೆಯನ್ನು ಮುಂದುವರಿಸಬೇಕೆಂದು ಸಲಹೆ ನೀಡಿದರು.ಅಲ್ಲದೆ ಗ್ರಾಮೀಣ ಭಾಗದ ಈ ಶಾಲೆಗೆ ಯೋಜನೆ ನೀಡಿರುವುದು ನಮ್ಮ ಸಂಸ್ಥೆಗೂ ಸಂತೋಷ ತಂದಿದೆ ಎಂದು ಮಾತನಾಡಿ ಕಾರ್ಯಕ್ರಮಕ್ಕೂ ಹಾಗೂ ಈ ವ್ಯವಸ್ಥೆಯನ್ನು ತರಿಸುವಲ್ಲಿ ಶ್ರಮವಹಿಸಿದ ಪ್ರಣವ್ ಫೌಂಡೇಶನ್ ಇದರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರಣವ್ ಫೌಂಡೇಶನ್ ನ ಅಧ್ಯಕ್ಷರಾದ ರಾಕೇಶ್ ರೈ ರವರು ವಹಿಸಿದ್ದರು.
ಶಾಲೆಯ ಕಂಪ್ಯೂಟರ್ ಶಿಕ್ಷಕ ರಾಕೇಶ್ ಕುಂದಲ್ಪಾಡಿ ರವರು ಮಾತನಾಡಿ ‘ಇಲ್ಲಿ ಕೇವಲ ವಿದ್ಯಾರ್ಥಿಗಳಲ್ಲದೆ ಸ್ಥಳೀಯ ಯುವಕ ಯುವತಿಯರಿಗೂ ಕೂಡ ಕಂಪ್ಯೂಟರ್ ಕಲಿಯುವ ಅವಕಾಶವನ್ನು ನಮ್ಮ ಸಂಸ್ಥೆ ಕಲ್ಪಿಸಿದೆ ಎಂದು ತರಬೇತಿ ನೀಡುವ ಬಗ್ಗೆ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಶಾಲಾ ಆಡಳಿತ ಸಮಿತಿಯ ಸಂಚಾಲಕ ಮಹೇಶ್ ಕುಮಾರ್ ರೈ ಮೇನಾಲ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಕೊಡುಗೆಯಾಗಿ ನೀಡಿದ ಸಂಸ್ಥೆಗೆ ಕೃತಜ್ಞತೆಯನ್ನು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಉದಯ ಚಂದ್ರ ಕುಂಬಳಚೇರಿ, ಕನ್ನಡ ಶಿಕ್ಷಕರಾದ ಶ್ರೀಮತಿ ಅರ್ಚನಾ ಕುಮಾರಿ ಉಪಸ್ಥಿತರಿದ್ದರು.

ಶಾಲೆಗೆ ಸುಮಾರು ಹತ್ತಕ್ಕೂ ಹೆಚ್ಚು ಕಂಪ್ಯೂಟರ್ ಹಾಗೂ ಸ್ಮಾರ್ಟ್ ಕ್ಲಾಸ್ ನಡೆಸಲು ವಿಶಾಲವಾದ ಎಲ್ಸಿಡಿ ಮತ್ತು ಇತರ ವಿದ್ಯುತ್ ಯಂತ್ರಗಳನ್ನು ಒಳಗೊಂಡ ವ್ಯವಸ್ಥೆಯನ್ನು ತಲುಪಿಸಿಕೊಟ್ಟ ರಾಂಬಸ್ ಚಿಪ್ ಟೆಕ್ನಾಲಜಿ ಸಂಸ್ಥೆಯ ಸದಸ್ಯರಾದ ತಮ್ಮಯ್ಯ ಅವರನ್ನು ಶಾಲೆ ಹಾಗೂ ಪ್ರಣವ್ ಫೌಂಡೇಶನ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಂಪ್ಯೂಟರ್ ತರಬೇತಿಯ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಕಂಪ್ಯೂಟರ್ ಕಲಿಕೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಮಹೇಶ್ ಕುಮಾರ್ ರೈ ಸ್ವಾಗತಿಸಿ ಶ್ರೀಮತಿ ಅರ್ಚನಾ ಕುಮಾರಿ ವಂದಿಸಿ ಕಚೇರಿ ಅಧೀಕ್ಷಕರಾದ ಶ್ರೀಮತಿ ಚಂದ್ರಮತಿ ಕುಂಬಳಚೇರಿ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಶಿಕ್ಷಕ ವೃಂದ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರವೀಣ್ ಮಜಿಕೋಡಿ, ಶ್ರೀಮತಿ ಜಯಲಕ್ಷ್ಮಿಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.