ಮಡಪ್ಪಾಡಿ ಗೌಡ ಕ್ರೀಡಾ ಸಮಿತಿಯಿಂದ ಕ್ರಿಕೆಟ್ ಪಂದ್ಯಾಟ : ಪೋಸ್ಟರ್ ಬಿಡುಗಡೆ

0

ಸಮಸ್ತ ಒಕ್ಕಲಿಗ ಗೌಡ ಸಮಾಜದ ಸಹಕಾರದೊಂದಿಗೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಿಗಾಗಿ ಗೌಡ ಕ್ರೀಡಾ ಸಮಿತಿ ಮಡಪ್ಪಾಡಿ ವತಿಯಿಂದ ನ.08 ರಿಂದ ನ. 09 ರವರೆಗೆ ಮಡಪ್ಪಾಡಿಯಲ್ಲಿ ನಡೆಯುವ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಪೋಸ್ಟರ್ ಬಿಡುಗಡೆ ನಡೆಯಿತು.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ‌ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಪೋಸ್ಟರ್ ಬಿಡುಗಡೆ ಮಾಡಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಮಡಪ್ಪಾಡಿ ಗೌಡ ಕ್ರೀಡಾ ಸಮಿತಿ ಅಧ್ಯಕ್ಷರಾದ ಸುಮಂತ್ ಶೀರಡ್ಕ, ಖಜಾಂಜಿ ಮನೀಶ್ ಕೇವಳ, ಸಂಚಾಲಕರಾದ ಕಿರಣ್ ಶೀರಡ್ಕ,ದುಷ್ಯಂತ್ ಶೀರಡ್ಕ,ಲೋಹಿತ್ ಬಾಳಿಕಳ, ರಕ್ಷಿತ್ ಶೀರಡ್ಕ, ಸುಳ್ಯ ತಾಲೂಕು ಗೌಡ ತರುಣ ಘಟಕದ ಅಧ್ಯಕ್ಷ ಪ್ರೀತಮ್ ಗೌಡ,ಜೆಡಿಎಸ್ ಯುವ ಮುಖಂಡ ನಿಹಾಲ್ ಕೋಡ್ತುಗುಳಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಪವನ್ ಪಲ್ಲತಡ್ಕ,ವಿಜೇಶ್ ಹಿರಿಯಡ್ಕ,ರಜತ್ ಅಡ್ಕಾರು, ಕೆ.ವಿ ಹೇಮನಾಥ,ವೀಕ್ಷಕ ವಿವರಣೆಗಾರ ನಿರಂತ್ ದೇವಶ್ಯ ಉಪಸ್ಥಿತರಿದ್ದರು.