ಪೈಚಾರು ನಿವಾಸಿ ಪಝಲ್ ರಹ್ಮಾನ್ ನಿಧನ

0

ಪೈಚಾರು ಬೊಳುಬೈಲು ನಿವಾಸಿ ಮಹಮ್ಮದ್ ಅವರ ಪುತ್ರ ಫಝಲ್ ರಹಮಾನ್ (25 ವರ್ಷ) ರವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ 26 ರಂದು ಮುಂಜಾನೆ ನಿಧನ ಹೊಂದಿದ್ದಾರೆ.

ಫಝಲ್ ರವರು ಕಳೆದ ಅನೇಕ ಸಮಯಗಳಿಂದ ಅಂಗಾಂಗಗಳ ವೈಫಲ್ಯ ದಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಕುಟುಂಬ ಆರ್ಥಿಕವಾಗಿ ತೊಂದರೆಯಲ್ಲಿದ್ದ ಕಾರಣ ಸುಳ್ಯ, ಪೈಚಾರು ಭಾಗದ ಯುವಕರ ತಂಡ ಆತನ ಚಿಕಿತ್ಸೆಯ ಸಹಾಯಕ್ಕಾಗಿ ಧನಸಂಗ್ರಹ ಮಾಡಿ ಶ್ರಮಿಸುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತರು ತಂದೆ ಮಹಮ್ಮದ್ ಹಾಗೂ ತಾಯಿ ಮತ್ತು ಓರ್ವ ಸಹೋದರ ಹಬೀಬ್ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.