ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಚುನಾವಣೆ

0

ಸಾಮಾನ್ಯ ಸ್ಥಾನದಿಂದ ನಾಮಪತ್ರ ಹಿಂಪಡೆದ 4 ಮಂದಿ ಅಭ್ಯರ್ಥಿಗಳು

ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ದೇಶ ಸಹಕಾರಿ ಸಂಘದ ಚುನಾವಣೆ ನವಂಬರ್ 2 ರಂದು ನಡೆಯಲಿದ್ದು ಅ 25ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕಾರ್ಯ ನಡೆದಿತ್ತು.

ಅಕ್ಟೋಬರ್ 27ರಂದು ನಾಮಪತ್ರ ಹಿಂಪಡೆಯುವ ದಿನವಾಗಿದ್ದು ಸಾಮಾನ್ಯ ಸ್ಥಾನದಿಂದ 4 ಮಂದಿ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದು ಕೊಂಡಿದ್ದಾರೆ.

ಎಸ್ ಶಂಸುದ್ದೀನ್ ಅರಂಬೂರು, ಬಿ ಉಮ್ಮರ್ ಕಲ್ಲುಮುಟ್ಲು, ಅಬೂಬಕ್ಕರ್ ಸಿದ್ದೀಕ್, ಮೊಹಮ್ಮದ್ ಪೈಝಲ್ ಇವರುಗಳು ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.

ಹಿಂದುಳಿದ ವರ್ಗ ಪ್ರವರ್ಗ ಎ ‘2’ ಮಹಮ್ಮದ್ ಇಕ್ಬಾಲ್ ಎಲಿಮಲೆ, ಹಿಂದುಳಿದ ವರ್ಗ ಪ್ರವರ್ಗ ಬಿ ಜಾರ್ಜ್ ಡಿಸೋಜಾ ರವರು ಅವಿರೋಧವಾಗಿ ಆಯ್ಕೆಗೊಂಡಿದ್ದರು.

ಸಾಮಾನ್ಯ ಕ್ಷೇತ್ರಕ್ಕೆ 9 ಮಂದಿ ಅಭ್ಯರ್ಥಿಗಳು ಬೇಕಾಗಿದ್ದು 10 ಮಂದಿ ಅಭ್ಯರ್ಥಿಗಳು ಪ್ರಸ್ತುತ ಕಣದಲ್ಲಿದ್ದಾರೆ.

ಮಹಿಳಾ ಮೀಸಲು ಕ್ಷೇತ್ರದಿಂದ 4 ಮಂದಿ ಮಹಿಳೆಯರು ಚುನಾವಣಾ ಕಣದಲ್ಲಿದ್ದು ನ 2 ರಂದು ಚುನಾವಣೆ ನಡೆಯಲಿದೆ.

ನಾಮಪತ್ರ ಹಿಂಪಡೆಯುವ ಮತ್ತು ಒಮ್ಮತದ ನಿಲುವು ತಾಳುವ ಕುರಿತು ಅಕ್ಟೋಬರ್ 26ರಂದು ಸುಳ್ಯ ಸೂಡ ಅಧ್ಯಕ್ಷರಾದ ಕೆ ಎಂ ಮುಸ್ತಫಾ ರವರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ ಎಂ ಶಹೀದ್ ತೆಕ್ಕಿಲ್ ರವರ ನೇತೃತ್ವದಲ್ಲಿ ದಿನವಿಡೀ ಅಭ್ಯರ್ಥಿಗಳ ಮನವೊಲಿಸುವ ಕಾರ್ಯ ನಡೆದಿತ್ತು. ಆದರೆ ಇದರಲ್ಲಿ ಎರಡು ತಂಡಗಳು ಜಿದ್ದಾಜಿದ್ದಿನಿಂದ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಚುನಾವಣೆಗೆ ಹೋಗುವವ್ಯವಸ್ಥೆಗೆ ಬಂದಿದೆ.