ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ನೆರವು ಕೋಶದ ಉದ್ಘಾಟನೆ

0

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ನೆರವು ಕೋಶದ ಉದ್ಘಾಟನೆ ಅ. 28ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಬಾರ್ ಅಸೋಸಿಯೇಷನ್ ಗ್ರಂಥಾಲಯ ಕಾರ್ಯದರ್ಶಿ ಅಶ್ವಿನ್ ಕುಮಾರ್ ನೆರವೇರಿಸಿ, ” ಕಾನೂನು ವಿದ್ಯಾರ್ಥಿ ಗಳು ಸಾರ್ವಜನಿಕರಿಗೆ ಕಾನೂನು ನೆರವು ಮತ್ತು ಅರಿವು ಒದಗಿಸುವಲ್ಲಿ ಕಾರ್ಯಪ್ರವೃತ್ತರಾಗಬೇಗು ಎಂದು ಹೇಳಿದರು. ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಕೆ.ವಿ ದಾಮೋದರ ಗೌಡ , ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ, ಉಪನ್ಯಾಸಕಿ ಶ್ರೀಮತಿ ಕಲಾವತಿ ಎಮ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಕಾನೂನು ನೆರವು ಕೋಶದ ಕಾರ್ಯಕ್ರಮ ಸಂಯೋಜಕಿ ಉಪನ್ಯಾಸಕಿ ಶ್ರೀಮತಿ ರಚನಾ ಕೆ, ಕಾನೂನು ನೆರವು ಕೋಶದ ಕಾರ್ಯದರ್ಶಿ ಪ್ರಕಾಶ್ ಎನ್.ಟಿ, ಜತೆಕಾರ್ಯದರ್ಶಿ ಕು. ಸಮೀಕ್ಷಾ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು ಪ್ರಲೋಕ್ಷಾ ಪ್ರಾರ್ಥಿಸಿದರು. ಕಾನೂನು ನೆರವು ಕೋಶದ ಸಂಯೋಜಕಿ ಶ್ರೀಮತಿ ರಚನಾ ಕೆ ಸ್ವಾಗತಿಸಿ, ಕಾನೂನು ನೆರವು ಕೋಶದ ಜತೆ ಕಾರ್ಯದರ್ಶಿ ಕು. ಸಮೀಕ್ಷಾ ಕೆ ವಂದಿಸಿದರು. ವಿದ್ಯಾರ್ಥಿನಿ ಕು ಕೀರ್ತನ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.