ಡಾ. ಕೆ.ವಿ. ಚಿದಾನಂದರ ಎಪ್ಪತ್ತನೇ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ ಸುಳ್ಯ ಜೂನಿಯರ್ ಕಾಲೇಜ್ ಅಮೃತ ಮಹೋತ್ಸವ ಸಮಿತಿ ಮುಖಂಡರು

0

ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದರವರ 70 ನೇಯ ವರ್ಷದ ಹುಟ್ಟುಹಬ್ಬಕ್ಕೆ ಅ.29 ರಂದು ಸುಳ್ಯ ಜೂನಿಯರ್ ಕಾಲೇಜು ಅಮೃತ ಮಹೋತ್ಸವ ಸಮಿತಿಯ ಅಂಗವಾಗಿ ಶ್ರೀರಾಂಪೇಟೆ ಡಾ.ಚಿದಾನಂದ ರವರ ನಿವಾಸಕ್ಕೆ ತೆರಳಿ ಸಮಿತಿಯ ಮುಖಂಡರು ಹುಟ್ಟುಹಬ್ಬಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಕೆ ಸಿ ಅಕ್ಷಯ್, ಹಾಗೂ ಚಿದಾನಂದ ಡಾ.ರವರ ವಿದ್ಯಾರ್ಥಿ ಜೀವನದ ಸಹಪಾಠಿ ವೈದ್ಯಕೀಯ ವೃತ್ತಿಯಲ್ಲಿ ವಿಶ್ವ ದಾಖಲೆ ಪಡೆದ ಡಾ ಬಿ ಸಿ ರಾಯ್ ಅವಾರ್ಡ್ ವಿನ್ನರ್ ಡಾ ದೊಡ್ಡ ಭದ್ರೆಗೌಡ ಡಿ ಎಂ ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಬಿ ಸದಾಶಿವ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಅಮೃತಮಹೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ ಎಂ ಮುಸ್ತಪಾ, ಸಮಿತಿಯ ಸದಸ್ಯರಾದ ಪಿ ಎ ಮಹಮ್ಮದ್, ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಅಮೃತ ಮಹೋತ್ಸವ ಸಮಿತಿಯ ಗೌರವ ಸಲಹೆಗಾರರಾದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಕುಮಾರ್ ಗೌಡ ಬೊಮ್ಮೆಟ್ಟಿ, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.

ಸಮಿತಿ ವತಿಯಿಂದ ಡಾ.ಕೆ ವಿ ಚಿದಾನಂದರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.