ಬೆಳ್ಳಿರಥದ ಸ್ವಾಗತಕ್ಕೆ ಹಾಲೆಮಜಲಿನಲ್ಲಿ ಪೂರ್ವಭಾವಿ ಸಭೆ
ಪ್ರಸಿದ್ಧ ಪುಣ್ಯಕ್ಷೇತ್ರವಾದ ಕುಕ್ಕೆಶ್ರೀ ಸುಬ್ರಹ್ಮಣ್ಯಕ್ಕೆ ಡಾ.ರೇಣುಕಾ ಪ್ರಸಾದ್ ಕೆ.ವಿ. ಮತ್ತು ಮನೆಯವರು ಬೆಳ್ಳಿರಥ ಸಮರ್ಪಣೆ ಮಾಡಲಿದ್ದು, ರಥವು ಸಾಗಿಬರುವ ಹಾಲೆಮಜಲಿನಲ್ಲಿ ಈ ಬಗ್ಗೆ ಪೂರ್ವಭಾವಿ ಸಭೆ ವೆಂಕಟೇಶ್ವರ ಸಭಾಭವನ ಹಾಲೆಮಜಲು ಇಲ್ಲಿ ನಡೆಯಿತು.
ರಥವು ನ.5ರಂದು ಸುಳ್ಯದಿಂದ ಹೊರಟು ಸೋಣಂಗೇರಿ, ದುಗ್ಗಲಡ್ಕ, ಗುತ್ತಿಗಾರು ಮೂಲಕ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಲುಪಲಿದೆ.















ಪೂರ್ವಭಾವಿ ಸಭೆಯಲ್ಲಿ ಡಾ.ಜ್ಯೋತಿ ಆರ್ ಪ್ರಸಾದ್,
ಪಿ.ಎಸ್ ಗಂಗಾಧರ, ಭವಾನಿಶಂಕರ ಅಡ್ತಲೆ ದಿನೇಶ್ ಮಡಪ್ಪಾಡಿ ,
, ಮೋಹನ್ ರಾಮ್ ಸುಳ್ಳಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಯಶೋದಾ ರಾಮಚಂದ್ರ, ಲಲಿತಾಜ ಮಲ್ಲಾರ, ಡಾl ಸೋಮಶೇಖರ ಕಟ್ಟೆಮನೆ, ವಿನೂಪ್ ಮಲ್ಲಾರ, ದಯಾನಂದ ಕಟ್ಟೆಮನೆ,
ಬೆಳ್ಯಪ್ಪ ಗೌಡ ಖಂಡಿಗೆ, ಜಗದೀಶ್ ಪಡ್ಪು, ಹಿಮ್ಮತ್ ಕೆ.ಸಿ, ಚಂದ್ರಹಾಸ ಶಿವಾಲ, ವಿಜಯಕುಮಾರ್ ಚಾರ್ಮತ, ದೊಡ್ಡಣ್ಣ ಬರೆಮೇಲು, , ವಸಂತ ಕಿರಿಭಾಗ, ದೇವಿಪ್ರಸಾದ್ ಕುದ್ಪಾಜೆ, ಜಯಂತ ತಳೂರು, ಸುರೇಶ್ ಪಿ, ಬಾಲಕೃಷ್ಣ, ಚಂದ್ರು, ಬೊಳಿಯಪ್ಪ ಪೈಕ, ಪದ್ಮನಾಭ ಕೆದಿಲ ಮತ್ತಿತರರು ಉಪಸ್ಥಿತರಿದ್ದರು .
ಸಭೆಯಲ್ಲಿ ಹರಿಹರ ಪಲ್ಲತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ನಾಲ್ಕೂರು ಗ್ರಾಮದವರು ನಡುಗಲ್ಲು ಪೇಟೆಯಲ್ಲಿ ಸೇರಿ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕೋರಲಾಯಿತು. ಅಲ್ಲದೆ ಮೆರವಣಿಗೆಯ ರೂಪರೇಷೆಗಳ ತಿಳಿಸಲಾಯಿತು. ಕೊನೆಯಲ್ಲಿ ಜಗದೀಶ್ ಪಡ್ಪು ವಂದಿಸಿದರು.










