ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರ “ಪಂಚಸಪ್ತತಿ – 2025” 75 ದಿವಸಗಳ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇವರು 20ನೇ ದಿವಸ, ಪೂ.ಗಂ.7.00ರಿಂದ 9.00ರವರೆಗೆ ಗುತ್ತಿಗಾರು ಪಿ.ಎಂ.ಶ್ರೀ.ಸ.ಹಿ.ಪ್ರಾ.ಶಾಲೆಯ ಆವರಣವದ ಗಿಡಗಂಟಿಗಳನ್ನು ಕಳೆಕೊಚ್ಚುವ ಯಂತ್ರದ ಮೂಲಕ ಸ್ವಚ್ಚಗೊಳಿಸಿದರು.















ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಅಮರ ಚಾರಿಟೇಬಲ್ ಟ್ರಸ್ಟ್ ನ ಚಂದ್ರಶೇಖರ ಕಡೋಡಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಸ್ವಚ್ಚತೆಯಲ್ಲಿ 5 ಕಳೆಕೊಚ್ಚುವ ಯಂತ್ರದೊಂದಿಗೆ, ಸ್ಪೋರ್ಟ್ಸ್ ಕ್ಲಬ್ಬಿನ 10 ಮಂದಿ ಸದಸ್ಯರು ಭಾಗವಹಿಸಿದ್ದರು.










