ಆರೋಗ್ಯ ಮಾಹಿತಿ ಕಾರ್ಯಾಗಾರ

ಜೇಸಿಐ ಪಂಜ ಪಂಚಶ್ರೀ ಇದರ ಜೇಸಿ ಸಪ್ತಾಹ-2025 ಪ್ರಯುಕ್ತ ಐದನೇ ದಿವಸದ ಕಾರ್ಯಕ್ರಮ “ಆರೋಗ್ಯ ಮಾಹಿತಿ” ಹದಿ ಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಹಾಗೂ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು ಮಾಹಿತಿ ಕಾರ್ಯಾಗಾರ ಅ.30 ರಂದು ಪಂಜ ಮೊರಾಜೀ ದೇಸಾಯಿ ವಸತಿ ಶಾಲೆ ಪಂಜದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಪಂಜ ವನಿತಾ ಸಮಾಜ(ರಿ) ಪೂರ್ವಾಧ್ಯಕ್ಷೆ ಶ್ರೀಮತಿ ತುಳಸಿ ದಯಾಪ್ರಸಾದ್ ಚೀಮುಳ್ಳು ಪೂರ್ವಾಧ್ಯಕ್ಷರು ದೀಪ ಬೆಗಿಸಿ ಉದ್ಘಾಟಿಸಿದರು.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ JFM ವಾಚಣ್ಣ ಕೆರೆಮೂಲೆ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಗಿರೀಶ್ , ಎಸ್ ಡಿ ಎಂ ಸಿ ಅಧ್ಯಕ್ಷ ರಮಾನಂದ ಯನ್.ಆರ್. ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ. , ಜೇಸಿಐ ಪಂಜ ಪಂಚಶ್ರೀ ನಿಕಟಪೂರ್ವಾಧ್ಯಕ್ಷ JFM ಜೀವನ್ ಮಲ್ಕಜೆ, ಕಾರ್ಯದರ್ಶಿ JFM ಅಶ್ವಥ್ ಬಾಬ್ಲುಬೆಟ್ಟು, ಸಪ್ತಾಹ ನಿರ್ದೇಶಕ JFM ದೇವಿ ಪ್ರಸಾದ್ ಚಿಕ್ಮುಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ JFM ವಾಸುದೇವ ಮೇಲ್ಪಾಡಿ ವೇದಿಕೆಗೆ ಆಹ್ವಾನಿಸಿದರು. JFM ವಾಚಣ್ಣ ಕೆರೆಮೂಲೆ ಸ್ವಾಗತಿಸಿದರು.JFM ಪ್ರವೀಣ್ ಕುಂಜತ್ತಾಡಿ ಜೇಸಿ ವಾಣಿ
ವಾಚಿಸಿದರು. JFM ಅಶ್ವಥ್ ಬಾಬ್ಲುಬೆಟ್ಟು ವಂದಿಸಿದರು. ಕಾರ್ಯಕ್ರಮದಲ್ಲಿ ಜೇಸಿ ಐ ಪಂಜ ಪಂಚ ಶ್ರೀ ಪೂರ್ವಾಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
















ನ. 1.ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಬೆಳಿಗ್ಗೆ ಗಂಟೆ 9 ರಿಂದ ನಡೆಯಲಿದೆ. ಚಿತ್ರಕಲಾ ಸ್ಪರ್ಧೆ ( ಸುಳ್ಯ ಮತ್ತು ಕಡಬ ತಾಲೂಕಿಗೆ ಒಳಪಟ್ಟ ವಿದ್ಯಾರ್ಥಿಗಳಿಗೆ ಮಾತ್ರ). LKG ಯಿಂದ 1ನೇ ತರಗತಿ ಐಚ್ಛಿಕ,2ರಿಂದ 4ನೇ ತರಗತಿ ಐಚ್ಛಿಕ,5ರಿಂದ 7ನೇ ತರಗತಿ ಪ್ರಕೃತಿ ವಿಕೋಪ,8ರಿಂದ 10ನೇ ತರಗತಿ ತಾಯಿ ವಾತ್ಸಲ್ಯ, ಪಿಯುಸಿ ತುಳುನಾಡ ಸಂಸ್ಕೃತಿ ವಿಷಯದಲ್ಲಿ ನಡೆಯಲಿದೆ.

ಸಂಜೆ ಗಂಟೆ 6 ರಿಂದ ಸಮಾರೋಪ ಸಮಾರಂಭದಲ್ಲಿ ಘಟಕದ ಪೂರ್ವಾಧ್ಯಕ್ಷ JFM ನಾಗಮಣಿ ಕೆದಿಲ ರವರಿಗೆ ಕಮಲಪತ್ರ ಪುರಸ್ಕಾರ ನಡೆಯಲಿದೆ. ಪಾಂಡಿಗದ್ದೆ ಸ.ಕಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಯಶೋಧರ ಕಳಂಜ ರವರಿಗೆ ಸನ್ಮಾನ ನಡೆಯಲಿದೆ. ಪರಿಸರದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ಸಮರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು. ಸುಮಾ ಕೋಟೆ ಇವರಿಂದ ಗಾನ ಸುಧೆ, ಸುಬ್ರಹ್ಮಣ್ಯ ಕೆ.ಎಸ್.ಎಸ್. ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ
ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ.











