ಶಾಂತಿನಗರ: ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

0

ಎಸ್ ಐ ಅವರಿಗೆ ಪ್ರಶ್ನೆಗಳ ಸುರಿಮಳೆ ಗೈದ ಪುಟಾಣಿ ವಿದ್ಯಾರ್ಥಿಗಳು

ಸುಳ್ಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸುಳ್ಯ ಪೊಲೀಸ್ ಇಲಾಖೆ ನೇತೃತ್ವದಲ್ಲಿ ಕಾನೂನು ಅರಿವು ಕಾರ್ಯಕ್ರಮ ಅ 30 ರಂದು ನಡೆಯಿತು.
ಸಮುದಾಯದತ್ತ ಕಾರ್ಯಕ್ರಮದ ಬಳಿಕ ಮಾಹಿತಿ ಅರಿವು ಕಾರ್ಯಕ್ರಮ ನಡೆಯಿತು.


ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕ ರಾದ ಸಂತೋಷ್ ಕುಮಾರ್ ಬಿ ಪಿ ರವರು ವಿದ್ಯಾರ್ಥಿಗಳಿಗೆ ಪೋಸ್ಕೊ ಕಾಯಿದೆ ಹಾಗೂ ಮಕ್ಕಳ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾಹಿತಿ ಅರಿವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಪುಟಾಣಿ ವಿದ್ಯಾರ್ಥಿಗಳು ಇನ್ಸ್ಪೆಕ್ಟರ್ ಸಂತೋಷ್ ರವರೊಂದಿಗೆ ಪ್ರಶ್ನೆಗಳ ಸುರಿಮಳೆ ಗೈದು ಸಂವಾದವನ್ನು ನಡೆಸಿದರು. ತಾವು ತಮ್ಮ ಬಳಿ ಗನ್ ಏಕೆ ಇಟ್ಟಿರುವುದು, ತಮ್ಮ ಶೋಲ್ಡರ್ ಪಟ್ಟಿಯಲ್ಲಿರುವ ಎರಡು ನಕ್ಷತ್ರಗಳ ಅರ್ಥವೇನು?
ತಾವು ಎಷ್ಟನೇ ವರ್ಷದಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದೀರಿ? ಪೊಲೀಸ್ ಠಾಣೆಯಲ್ಲಿ ಎಷ್ಟು ಜೈಲುಗಳು ಇವೆ ಎಂಬಿತ್ಯಾದಿ ರಸಭರಿತ ಪ್ರಶ್ನೆಯನ್ನು ಕೇಳಿ ಮಾಹಿತಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರ ನೀಡಿದ ಎಸ್ ಐ ಸಂತೋಷ್ ರವರು ಮಕ್ಕಳ ಪ್ರಶ್ನೆ ಹಾಕುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಹಸೈನಾರ್ ಜಯನಗರ ರವರು ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಜೀರ್ ಶಾಂತಿನಗರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಪವಿತ್ರ ಹಾಗೂ ಶಿಕ್ಷಕಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಸೌಮ್ಯಶ್ರೀ ಸ್ವಾಗತಿಸಿ ವಾಣಿಶ್ರೀ ವಂದಿಸಿದರು.
ಶಾಲಾ ಎಸ್ ಡಿ ಎಂ ಸಿ ಸದಸ್ಯರು ಪೋಷಕ ವೃಂದದವರು, ಶಿಕ್ಷಕರು, ಅಂಗನವಾಡಿ ಶಿಕ್ಷಕರು,ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.