ಬಿಸಿಲೆ ಘಾಟ್ ಅಪಘಾತ: ಗಂಭೀರ ಗಾಯಗೊಂಡಿದ್ದ ಓರ್ವ ಸಾವು

0

6 ಜನರ ಗಂಭೀರ

ಮದುವೆ ದಿಬ್ಬಣ ಬರುತ್ತಿದ್ದ ವ್ಯಾನ್ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಅವರ ಪೈಕಿ ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ.

ಸಕಲೇಶಪುರ ತಾಲೂಕಿನ ವನಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮದುವೆಗೆಂದು ಹೊರಟಿದ್ದ ವ್ಯಾನ್ ವೊಂದು ಚಾಲಕನ ಹತೋಟಿ ತಪ್ಪಿ ಬಿಸ್ಲೆ ಘಾಟ್ ಸಮೀಪ ಮಗುಚಿ ಬಿದ್ದ ಘಟನೆ ಅ.30 ರ ಬೆಳಿಗ್ಗೆ ನಡೆದಿದ್ದು ಒಟ್ಟು ಸುಮಾರು 30 ಮಂದಿ ವ್ಯಾನ್ ನಲ್ಲಿದ್ದರು,

ಅದರಲ್ಲಿ 20 ಮಂದಿ ಗಾಯಗೊಂಡಿದ್ದು ಇದರಲ್ಲಿ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಶಿವರಾಜ್ ( 50) ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.