ಜೇಸಿಐ ಸುಳ್ಯ ಪಯಸ್ವಿನಿಗೆ ಬೆಸ್ಟ್ ಎಕ್ಸಲೆನ್ಸ್ ಅವಾರ್ಡ್

0

ಜೇಸಿಐ ಮಂಗಳೂರು ಸಾಮ್ರಾಟ್ ಆಶ್ರಯದಲ್ಲಿ ನಡೆದ ಜೇಸಿ ವಲಯ ಸಮ್ಮೇಳನ-2025 ರಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕವು ಹಲವಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು, ಈ ವರ್ಷದ ಬೆಸ್ಟ್ ಎಕ್ಸಲೆನ್ಸ್ ಅವಾರ್ಡ್ ನ್ನು ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷರಾದ ಜೇಸಿ ಸುರೇಶ್ ಕಾಮತ್ ವಲಯಾಧ್ಯಕ್ಷರಾದ ಜೇಸಿ ಅಭಿಲಾಷ್ ರವರಿಂದ ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಪೂರ್ವ ವಲಯಾಧ್ಯಕ್ಷರಾದ ಜೇಸಿ ಅಶೋಕ್ ಚೂಂತಾರು, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ದೇವರಾಜ್ ಕುದ್ಪಾಜೆ, ಜೇಸಿ ಗುರುಪ್ರಸಾದ್ ನಾಯಕ್, ಹಾಗು ಜೇಸಿ ಉಮೇಶ್ ಬೊಳುಗಲ್ಲು, ಜೇಸಿ ಶೋಭಾ ಅಶೋಕ್ ಉಪಸ್ಥಿತರಿದ್ದರು.