ಅಡ್ತಲೆ : ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಆರನೇ ಕಾರ್ಯಕ್ರಮ

0

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ಪಂಚಸಪ್ತತಿ ಸ್ವಚ್ಛತಾ ಅಭಿಯಾನ-2025 ರ ಅಂಗವಾಗಿ ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ವತಿಯಿಂದ ಅರಂತೋಡಿನಿಂದ ಅಡ್ತಲೆವರೆಗಿನ ವಿದ್ಯುತ್ ಪರಿವರ್ತಕಗಳು ಇರುವ ಸ್ಥಳಗಳನ್ನು ಕಾಡು ಕಡಿದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ವಿದ್ಯುತ್ ಹಂಗಾಮಿ ಗ್ಯಾಂಗ್ ಮೆನ್ ಹಾಗೂ ಸ್ಪಂದನದ ಸದಸ್ಯ ಲಿಂಗರಾಜ ಮೇಲಡ್ತಲೆ, ಕಾರ್ಯದರ್ಶಿ ಸಂತೋಷ್ ಪಿಂಡಿಮನೆ, ಸದಸ್ಯರಾದ ಚೇತನ್ ಎಂ.ಎ ಬೆದ್ರುಪಣೆ ಹಾಗೂ ಸದಸ್ಯರುಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು