ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕಮಲ. ಯಂ. ಮಾನಾಡು ಆ.31ರಂದು ಸೇವಾ ನಿವೃತ್ತಿ ಹೊಂದಿದರು.















2000 ನೇ ಇಸವಿಯಲ್ಲಿ ಖಾಸಗಿಯಾಗಿ ಆರಂಭವಾದ ದೇವರಗದ್ದೆ ಅಂಗನವಾಡಿಯಲ್ಲಿ ವೃತ್ತಿ ಆರಂಭಿಸಿದ, ಇವರು ಸುಧೀರ್ಘ 25 ವರ್ಷಗಳ ಕಾಲ ಕೆಲಸವನ್ನು ಪೂರೈಸಿದ್ದಾರೆ. ಈ ಅಂಗವಾಡಿ ಕೇಂದ್ರ 2000 ಇಸವಿಯಲ್ಲಿ ಸರ್ಕಾರಿ ಅಂಗನವಾಡಿ ಕೇಂದ್ರವಾಗಿ ಮಾರ್ಪಟ್ಟಿತ್ತು. ಕಮಲಾ ಅವರು ತಮ್ಮ ಸೇವಾವಧಿಯಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾರ್ಜನೆ ಮಾಡಿ, ಲಾಲನೆ ಪಾಲನೆ ಮಾಡಿದ್ದಾರೆ. ಇವರ ಪತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮೋನಪ್ಪ ಮನಾಡು . ಇವರ ಪುತ್ರ ಪ್ರಸಾದ್ ಕುಮಾರ್, ಪುತ್ರಿ ಶ್ರೀಮತಿ ಲಾವಣ್ಯ ರಾಘವೇಂದ್ರ.










