ಸುಳ್ಯದಲ್ಲಿ ಐಡಿಯಲ್ ಐಸ್ ಕ್ರೀಮ್ ಅಧಿಕೃತ ಮಾರಾಟ ಸಂಸ್ಥೆಆದಿತ್ಯಡಿಸ್ಟ್ರಿಬ್ಯೂಟರ್ಸ್ ಶುಭಾರಂಭ

0

ಸುಳ್ಯದ ಜಟ್ಟಿಪಳ್ಳ ಆರ್.ಕೆ. ಯಾರ್ಡ್ ನಲ್ಲಿ ಐಡಿಯಲ್ ಐಸ್ ಕ್ರೀಮ್ ರವರ ಅಧಿಕೃತ ಮಾರಾಟ ಮಳಿಗೆ ಸುಳ್ಯದ ಚೆನ್ನಕೇಶವ ರವರ ಮಾಲಕತ್ವದ ಆದಿತ್ಯ ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆಯು ನ.1 ರಂದು ಶುಭಾರಂಭ ಗೊಂಡಿತು.

ಹಿರಿಯರಾದ ಶ್ರೀಮತಿ ಪ್ರೇಮಾ ರವರು ದೀಪ ಪ್ರಜ್ವಲಿಸಿದರು.
ಐಡಿಯಲ್ ಸಂಸ್ಥೆಯ ಮ್ಯಾನೇಜರ್ ರಾಹುಲ್ ಕಾಮತ್, ಕಿಶನ್, ಲಿಖಿತ್, ಚೇತನ್,ಹಿರಿಯ ಉದ್ಯಮಿ ಕೃಷ್ಣಕಾಮತ್ ಆರಂಬೂರು,
ಆರ್. ಕೆ ಯಾರ್ಡ್ ಮಾಲಕ ಇಂಜಿನಿಯರ್ ಕೃಷ್ಣ ರಾವ್,ವೆಂಕಟ್ರಮಣ ದೇವ ಮಂದಿರದ ಅಧ್ಯಕ್ಷ ಪ್ರಕಾಶ್ ಶೆಣೈ, ಜಿ. ಜಿ. ನಾಯಕ್, ಪ್ರದೀಪ್ ಪ್ರಭು, ಮಾಲಕರ ಬಂಧುಗಳಾದ ಶ್ರೀಮತಿ ಶ್ರುತಿ, ರಾಘವೇಂದ್ರ ಕಾಮತ್, ಕೇಶವ ಭಟ್ ಮತ್ತಿತರರು ಉಪಸ್ಥಿತರಿದ್ದರು. ಚೆನ್ನಕೇಶವ ಮತ್ತು ಶ್ರೀಮತಿ ಸ್ವಾತಿ ದಂಪತಿ ಎಲ್ಲರನ್ನು ಸ್ವಾಗತಿಸಿದರು.
ಮುಂದಿನ ದಿನಗಳಲ್ಲಿ ಐಡಿಯಲ್ ರವರ ಎಲ್ಲಾ ಉತ್ಪನ್ನಗಳು ತಾಲೂಕಿನ ಎಲ್ಲಾ ವ್ಯಾಪಾರ ಮಳಿಗೆಗಳಿಗೆ ಹಾಗೂ ಮದುವೆ ಇನ್ನಿತರ ಸಭೆ ಸಮಾರಂಭಗಳಿಗೆ ಹೋಲ್ ಸೆಲ್ ಆಗಿ ವಿತರಣೆ ಮಾಡಲಾಗುವುದು ಎಂದು ಮಾಲಕರು ತಿಳಿಸಿದರು.