ಬೆಳ್ಳಾರೆ: ಲಯನ್ಸ್ ಕ್ಲಬ್ ಸದಸ್ಯೆ ಲ. ಭವಾನಿ ವಿ. ಶೆಟ್ಟಿಯವರಿಗೆ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ

0

ಅ. 27ರಂದು ನಿಧನರಾದ ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಸ್ಥಾಪಕ ಸದಸ್ಯೆ ಲ. ಭವಾನಿ ವಿ.‌ ಶೆಟ್ಟಿಯವರಿಗೆ ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಅ. 30ರಂದು ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಕ್ಲಬ್‌ನ ಅಧ್ಯಕ್ಷ ಲ. ಯತೀಶ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.


ವೇದಿಕೆಯಲ್ಲಿದ್ದ ಅಧ್ಯಕ್ಷ ಲ. ಯತೀಶ್ ಭಂಡಾರಿ, ಐಪಿಪಿ ಲ. ಉಷಾ ಬಿ. ಭಟ್, ವಲಯಾಧ್ಯಕ್ಷ ಜಗನ್ನಾಥ ರೈ, ಪ್ರಥಮ ಉಪಾಧ್ಯಕ್ಷ ಲ. ದಯಾಕರ ಆಳ್ವ, ನಿಕಟಪೂರ್ವ ಕೋಶಾಧಿಕಾರಿ ಲ. ಈಶ್ವರ ವಾರಣಾಶಿ, ಲ. ಸುನಿತಾ ಮನೋಹರ್, ಸದಸ್ಯರಾದ ಪ್ರದೀಪ್ ಕುಮಾರ್ ರೈ ಪಾಂಬಾರು ಮೃತರಿಗೆ ನುಡಿನಮನ ಸಲ್ಲಿಸಿದರು.

ವೇದಿಕೆಯಲ್ಲಿ ಕೋಶಾಧಿಕಾರಿ ಲ. ಎಂ.ಕೆ. ಶೆಟ್ಟಿ ಉಪಸ್ಥಿತರಿದ್ದರು. ಸದಸ್ಯರಾದ ಲ. ಹೊನ್ನಪ್ಪ ಬೆಳ್ಳಾರೆ, ಲ. ಮನೋಹರ್, ಲ. ಚಿದಾನಂದ ರೈ, ಲ. ರಮಾನಂದ ರೈ, ಲ. ಉಮೇಶ್ ರೈ ಮರುವಂಜ, ಲ. ವಿಲಾಸ್ ರೈ ಬೆಳ್ಳಾರೆ, ಕಾವು ಕ್ಲಬ್‌ನ ಕಾರ್ಯದರ್ಶಿ ಲ. ರಮೇಶ್ ಆಳ್ವ ಮತ್ತು ಕೋಶಾಧಿಕಾರಿ ಲ. ದೇವಣ್ಣ ರೈ ಸಭೆಯಲ್ಲಿ ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.