ಕೋಡಿ ಮಠ ಶ್ರೀಗಳ ಉಪಸ್ಥಿತಿ
ಭರದಿಂದ ಸಾಗುತ್ತಿದೆ ಪೂರ್ವ ಸಿದ್ಧ

ಸುಳ್ಯ ತಾಲೂಕಿನ ಕರಿಕ್ಕಳ, ಎಣ್ಮೂರು-ಐವತ್ತೊಕ್ಲು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ
ನ. 05 ರಂದು ಶ್ರೀಮಹಾವಿಷ್ಣು ಮಹಾಯಾಗ ನಡೆಯಲಿದ್ದು ಭರದಿಂದ
ಪೂರ್ವ ಸಿದ್ಧತೆ ನಡೆಯುತ್ತಿದೆ. ಸಹಸ್ರಾರು ಭಕ್ತರು ಸೇರಲ್ಲಿದ್ದು ಮಹಾಯಾಗ, ಭೋಜನ ವ್ಯವಸ್ಥೆ , ಪಾಕ ಶಾಲೆ, ಪಾರ್ಕಿಂಗ್ ವ್ಯವಸ್ಥೆ, ಹಾಗೂ ಭಕ್ತಾದಿಗಳಿಗೆ ಸ್ಥಳಾವಕಾಶಕ್ಕಾಗಿ ವಿಶಾಲವಾಗಿ ಭೂ ಸಮತ್ತಟ್ಟು ಗೊಳಿಸುವ ಕಾರ್ಯವು ಭರದಿಂದ ಸಾಗುತ್ತಿದೆ.
















ಲೋಕ ಕಲ್ಯಾಣಾರ್ಥವಾಗಿ ಹಾಗೂ 2026ನೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಶ್ರೀ ದೇವರ ಪುನಃಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ನೂತನ ದೇವಾಲಯದ ಲೋಕಾರ್ಪಣೆಯ ಪೂರ್ವಭಾವಿಯಾಗಿ, ಪರಮಪೂಜ್ಯ ಶ್ರೀಶ್ರೀಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಕೋಡಿಮಠ ಮಹಾಸಂಸ್ಥಾನ ಅರಸೀಕೆರೆ ಇವರ ಉಪಸ್ಥಿತಿಯಲ್ಲಿ, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇ। ಮೂ। ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಊರ ಹಾಗೂ ಪರವೂರ ಭಗವದ್ಭಕ್ತರ ಸಹಕಾರದೊಂದಿಗೆ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ವೇ। ಮೂ। ಅಕ್ಷಯ ಭಟ್ ಬರ್ಲಾಯಬೆಟ್ಟು ಇವರ ಪೌರೋಹಿತ್ಯದಲ್ಲಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀಮಹಾವಿಷ್ಣು ಮಹಾಯಾಗ ಜರಗಲಿರುವುದು. ಬೆಳಿಗ್ಗೆ ಗಂಟೆ 8 ಕ್ಕೆ ಶ್ರೀ ಮಹಾವಿಷ್ಣು ಮಹಾಯಾಗ ಪ್ರಾರಂಭ . ಬೆಳಿಗ್ಗೆ ಗಂಟೆ 10 ಕ್ಕೆ ಶ್ರೀಶ್ರೀಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಕೋಡಿಮಠ, ಅರಸೀಕೆರೆ ಮಹಾಸಂಸ್ಥಾನದ ಶ್ರೀಗಳಿಂದ ಆಶೀರ್ವಚನ. ಮಧ್ಯಾಹ್ನ ಮಹಾಯಾಗದ ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಹಾಪೂಜೆ, ಪ್ರಸಾದ ಭೋಜನ ನಡೆಯಲಿದೆ. ಪೂಜೆ ಮಾಡಿಸುವ ಪ್ರತಿಯೊಬ್ಬರ ಹೆಸರಿನಲ್ಲಿ ದೇವರ ಮುಂದೆ ಸಂಕಲ್ಪ ಮಾಡಲಾಗುವುದು. ಆದುದರಿಂದ ಹೆಸರು. ನಕ್ಷತ್ರ, ರಾಶಿ ವಿವರ ನೀಡುವುದು.ಮಹಾಯಾಗದಲ್ಲಿ ಪಾಲ್ಗೊಳ್ಳಲು ಅಸಾಧ್ಯವಾದಲ್ಲಿ ಪೂಜಾ ಪ್ರಸಾದವನ್ನು ಕಳುಹಿಸಲಾಗುವುದು. ತಮ್ಮ ವಿಳಾಸ ವಾಟ್ಸಪ್ ಮೂಲಕ ತಿಳಿಸುವುದು. ದೇವಳದ ವಾಟ್ಸಪ್ ನಂ. 8747020030 ಕಳುಹಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












