ರಸಪ್ರಶ್ನೆ ಸ್ಫರ್ಧೆಯಲ್ಲಿ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಶ್ರೀಪ್ರಸಾದ್ ಕಾಟೂರುರವರಿಗೆ ಬಹುಮಾನ

0

ವೈಶ್ವಿಕ್ ಹಿಂದಿ ಪರಿವಾರ ವತಿಯಿಂದ ರಾಜಭಾಷಾ ವಿಭಾಗದ ಸ್ವರ್ಣ ಜಯಂತಿ ಆಚರಣೆ ಪ್ರಯುಕ್ತ ೧೮ ರಿಂದ ೨೫ ವರ್ಷದ ಯುವಕರಿಗೆ ಏರ್ಪಡಿಸಿದ ಆನ್ ಲೈನ್ ಹಿಂದಿ ರಸಪ್ರಶ್ನೆ ಸ್ಫರ್ಧೆಯಲ್ಲಿ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ ಶ್ರೀ ಪ್ರಸಾದ್ ಕಾಟೂರು ೫೦ ಕ್ಕೆ ೫೦ ಅಂಕಗಳನ್ನು ಪಡೆದು ರಾಜ್ಯದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ವಿಜೇತರನ್ನು ಅ. ೨೬ರಂದು ಬೆಂಗಳೂರಿನ ಸಾಹಿತ್ಯ ಸಾಧಕಮಂಚ್ ವತಿಯಿಂದ ನಗದು ಬಹುಮಾನ ನೀಡಿ ಶಾಲು ಹೊದೆಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಇವರೊಂದಿಗೆ ಮಾರ್ಗದರ್ಶಕರಾಗಿದ್ದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀ ರಾಮಕೃಷ್ಣ ಕೆ ಎಸ್ ಇವರನ್ನು ಕೂಡ ಸನ್ಮಾನಿಸಲಾಯಿತು. ಸ್ಫರ್ಧೆಯಲ್ಲಿ ಕರ್ನಾಟಕದಿಂದ ಸುಮಾರು ೨೫೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಹುಮಾನ ವಿಜೇತರಾದ ಪ್ರಸಾದ್ ರವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ದ್ವಿತೀಯ ವರ್ಷದ ಹಿಂದಿ ಎಂ ಎ ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.