ಸುಳ್ಯ: ಎನ್.ಎಂ.ಸಿ.ಯಲ್ಲಿ “ಜಿಎಸ್‌ಟಿ ಸುಧಾರಣೆಗಳು: ಭಾರತದ ಆರ್ಥಿಕತೆಯ ಮೇಲೆ ಪರಿಣಾಮ” ವಿಚಾರಗೋಷ್ಠಿ

0

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ, ವಾಣಿಜ್ಯ ಸಂಘಟನೆ ಹಾಗೂ ಐಕ್ಯುಎಸಿ (IQAC) ಸಂಯುಕ್ತ ಆಶ್ರಯದಲ್ಲಿ “ಜಿಎಸ್‌ಟಿ ಸುಧಾರಣೆಗಳು: ಭಾರತದ ಆರ್ಥಿಕತೆಯ ಮೇಲೆ ಪರಿಣಾಮ” ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಅ.31ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಡಾ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಕಾರ್ಯಕ್ರಮವನ್ನು ಶಾಸಕಿ ಕು. ಭಾಗಿರಥಿ ಮುರುಳ್ಯ ಉದ್ಘಾಟಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಮುಖ ಭಾಷಣವನ್ನು ಬೆಂಗಳೂರಿನ ಹಿರಿಯ ಲೆಕ್ಕ ಪರಿಶೋಧಕರು ವಿಶ್ವನಾಥ್ ಭಟ್ ನೀಡುತ್ತಾ ಜಿಎಸ್‌ಟಿ ಸುಧಾರಣೆಗಳು ಭಾರತದ ಆರ್ಥಿಕ ಪ್ರಗತಿಯಲ್ಲಿ ತಂದಿರುವ ಬದಲಾವಣೆಗಳ ಬಗ್ಗೆ ವಿಶ್ಲೇಷಿಸಿದರು.

ಈ ಸಂದರ್ಭ ವೇದಿಕೆಯಲ್ಲಿ
ಕಾರ್ಯಕ್ರಮದ ಸಂಯೋಜಕರಾಗಿ ವಾಣಿಜ್ಯ ಸಂಘದ ಸಂಯೋಜಕಿ ದಿವ್ಯಾ ಟಿ.ಎಸ್, ಐಕ್ಯುಎಸಿ ಸಂಯೋಜಕರಾದ ಡಾ. ಮಮತಾ ಕೆ. ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕರಾದ ಗಣೇಶ್ ಭಟ್, ಲೆಕ್ಕ ಪರಿಶೋಧಕರಾದ ಆರ್.ಕೆ ಭಟ್, ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ನ.ಪಂ. ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಹೇಮಂತ್ ಸುಳ್ಯ, ರಂಜಿತ್ ಸುಳ್ಯ, ಮತ್ತಿತರರು ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗ ಮುಖ್ಯಸ್ಥರಾದ ರತ್ನಾವತಿ ಡಿ ಸ್ವಾಗತಿಸಿ, ಉಪನ್ಯಾಸಕರಾದ ದಿವ್ಯಾ ಟಿ. ಎಸ್ ವಂದಿಸಿದರು. ಅಂತಿಮ ಬಿ. ಕಾಂ ವಿದ್ಯಾರ್ಥಿನಿ ತುಳಸಿ ಪ್ರಾರ್ಥಿಸಿದರು. ದೀಕ್ಷಿತ ಜಿ. ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಪವನ್ ಅತಿಥಿಯನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀಧರ್ ವಿ, ಗೀತಾ ಶೆಣೈ ಹಾಗೂ ವಿಭಾಗ ವಿದ್ಯಾರ್ಥಿಗಳಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.