ಮರ್ಕಂಜ ಸ್ಪೂರ್ತಿ ಮಹಿಳಾ ಮಂಡಳದ ವತಿಯಿಂದ ಕನ್ನಡ ರಾಜ್ಯೋತ್ಸವ

0

ಸ್ಪೂರ್ತಿ ಮಹಿಳಾ ಮಂಡಳಿ ಮರ್ಕಂಜ ಇದರ ವತಿಯಿಂದ ನ.1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಐಸಿರಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಿತಾ ಗುಂಡಿ ಇವರು ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ಪುಷ್ಪ ತೇರ್ಥಮಜಲು, ಅಂಗನವಾಡಿ ಕಾರ್ಯಕರ್ತೆ ಸುನಿತಾ ಹಲ್ಡಡ್ಕ, ಮಂಡಳಿಯ ಪೂರ್ವಾಧ್ಯಕ್ಷರು ಆಗಿರುವ ಲತಾ ಜೋಗಿಮೂಲೆ ಹಾಗೂ ಜ್ಯೋತಿ ಮಾವಜಿ ಉಪಸ್ಥಿತರಿದ್ದರು.


ಅನಿತಾ ಮತ್ತು ಶಶಿಕಲಾ ಅವರ ಗಣಪತಿ ಸ್ತುತಿಯಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಶಾಂತಲಾ ನಾರ್ಕೋಡು ಸ್ವಾಗತಿಸಿದರು. ಮಹಾಲಕ್ಷ್ಮಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹೇಮಲತಾ ಧನ್ಯವಾದ ಸಲ್ಲಿಸಿದರು. ನಾಡಗೀತೆ ಇನ್ನಿತರ ಕನ್ನಡ ಹಾಡುಗಳು ,ಕನ್ನಡ ಭಾಷೆಗೆ ಸಂಬಂಧ ಪಟ್ಟ ಸಣ್ಣ ಪುಟ್ಟ ಆಟಗಳು ನಡೆಯಿತು.