ಬೊಳುಬೈಲು: ಸ. ಕಿ. ಪ್ರಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದಾನಿಗಳಿಂದ ಸಮವಸ್ತ್ರ ವಿತರಣೆ

0

ಸ. ಕಿ. ಪ್ರಾ. ಶಾಲೆ ಬೊಳುಬೈಲು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದಾನಿಗಳಿಂದ ಸಮವಸ್ತ್ರ ವಿತರಣೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಹಾಸ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾ. ಪಂ. ಸದಸ್ಯೆ ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು, ಎಸ್ ಡಿ ಎಂ. ಸಿ. ಉಪಾಧ್ಯಕ್ಷೆ ಶ್ರೀಮತಿ ನಿರ್ಮಲಾ ರಾಜೇಶ್, ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳು, ಅಡುಗೆ ಸಹಾಯಕಿ ಶ್ರೀಮತಿ ಜಯಂತಿ ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರಾಧಮ್ಮರವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ನಾಡಗೀತೆಯನ್ನು ಹಾಡಿ, ತದನಂತರ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು.

ಕೊಡುಗೈದಾನಿ, ಸತ್ಯಸಾಯಿ ಸೇವಾ ಸಮಿತಿ ಚೊಕ್ಕಾಡಿ ಮತ್ತು ಪುತ್ತೂರು ಪ್ರಸ್ತುತ ಸಕ್ರೀಯವಾಗಿ ಮಂಗಳೂರಿನ ಸಮಿತಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ
ಶ್ರೀಮತಿ ಸುಮತಿ ಗೋಪಣ್ಣ ಗೌಡ ಕುದ್ಕುಳಿ ಮತ್ತು ಶ್ರೀಮತಿ ಪ್ರೇಮ ಭಕ್ತವತ್ಸಲ ಮಂಡ್ಯ ಇವರು ಭಗವಾನ್ ಶ್ರೀ ಸತ್ಯಸಾಯಿಬಾಬ ರವರ100ನೇ ಜನ್ಮದಿನೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನೀಡಿದರು.


ದಾನಿಗಳ ಅನುಪಸ್ಥಿತಿಯಲ್ಲಿ ಅವರ ನಿಕಟ ಬಂಧು ಶ್ರೀಮತಿ ಗೀತಾಗೋಪಿನಾಥ್ ಬೊಳುಬೈಲು ವಿದ್ಯಾರ್ಥಿಗಳಿಗೆ ತಮ್ಮ ದಿವ್ಯ ಹಸ್ತದಿಂದ ಸಮವಸ್ತ್ರ ವಿತರಣೆಯನ್ನು ಮಾಡಿ ದಾನಿಗಳ ಬಗ್ಗೆ ಮಾತನಾಡಿ ಅವರಿಗೆ ಶುಭವನ್ನು ಹಾರೈಸಿದರು.

ಶ್ರೀಮತಿ ವಸಂತಿ ಮತ್ತು ಶಿವಣ್ಣ ರವರ ಮಗ ಜೀವನ್ ಆರ್ಭಡ್ಕರವರು ವಾಯುಸೇನೆಯಲ್ಲಿ ಮೆಡಿಕಲ್ ಅಸಿಸ್ಟೆಂಟ್ ಆಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ವಿತರಿಸಿದರು.