














ಪವಿತ್ರ ಉಮ್ರಾ ನಿರ್ವಹಿಸಲು ಮಕ್ಕಾಕ್ಕೆ ತೆರಳಲಿರುವ ಅಶ್ರಫ್ ಗುಂಡಿಯವರನ್ನು ತೆಕ್ಕಿಲ್ ಹೆಚ್.ಪಿ ಗ್ಯಾಸ್ ಎಜೆನ್ಸಿ ಮತ್ತು ತೆಕ್ಕಿಲ್ ಪ್ರತಿಷ್ಠಾನ ವತಿಯಿಂದ ಬೀಳ್ಕೊಡಲಾಯಿತು.
ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ ರವರು ಅಶ್ರಫ್ ಗುಂಡಿಯವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಟ್ಟರು. ಈ ಸಂಧರ್ಭದಲ್ಲಿ ತೆಕ್ಕಿಲ್ ಹೆಚ್.ಪಿ ಗ್ಯಾಸ್ ನ ವ್ಯವಸ್ಥಾಪಕ ಧನುರಾಜ್ ಊರುಪಂಜ ಸಿಬ್ಬಂಧಿಗಳಾದ ಬಬಿತಾ ಅಡ್ಯಡ್ಕ, ಬಿಂದ್ಯಾ ಕಿರ್ಲಾಯ, ಉಮ್ಮರ್ ಬೆಳ್ಳಾರೆ, ಲತೀಫ್ ಮೊಟ್ಟೆಂಗಾರ್ ಸಿರಾಜ್ ಪೈಚಾರ್, ಆಸಿಫ್ ಜಯನಗರ, ಆರಿಪ್ ದರ್ಖಾಸ್, ಆಪ್ತ ಸಹಾಯಕ ಅನಿಲ್ ಬಟ್ವಾಳ, ಗೌತಮ್ ಸಂಪಾಜೆ, ಸಮದ್ ಗುಂಡಿ, ಮೊದಲಾದವರು ಉಪಸ್ಥಿತರಿದ್ದರು.











