ಆಲೆಟ್ಟಿ ಗ್ರಾಮದ ಬಡ್ಡಡ್ಕದ ಆಡಿಂಜ ಎಂಬಲ್ಲಿ ಅವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 4 ರಂದು ವರದಿಯಾಗಿದೆ.















ಮೃತಪಟ್ಟ ಯುವಕ ಆಡಿಂಜ ನಿವಾಸಿ ದಿ. ಸುಂದರ ನಾಯ್ಕ್ ರವರ ಪುತ್ರ ರವಿಚಂದ್ರ( 29) ಎಂದು ತಿಳಿದು ಬಂದಿದೆ. ಮನೆಯಲ್ಲಿ ತಾಯಿ ಮತ್ತು ಮಗ ಮಾತ್ರ ವಾಸವಿದ್ದು ಬೆಳಗ್ಗೆ ತಾಯಿ ಸುಶೀಲ ರವರು ಪಕ್ಕದ ಮನೆಗೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಯ ಪಕ್ಕಾಸಿಗೆ ನೇಣು ಬಿಗಿದು ಕೃತ್ಯವೆಸಗಿಕೊಂಡಿರುವುದಾಗಿ ತಿಳಿದು ಬಂದಿದೆ. ಮೃತ ಯುವಕ ತಾಯಿ ಮತ್ತು ಸಹೋದರಿ ಶ್ರೀಮತಿ ಕವಿತಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಸ್ಥಳಕ್ಕೆ ಪೋಲಿಸರು ತೆರಳಿದ್ದು ಮಹಜರು ನಡೆಸಿ ಮರಣೋತ್ತರ ಶವ ಪರೀಕ್ಷೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆ ತರಲಾಗಿದೆ. ಆತ್ಮಹತ್ಯೆಗೆ ಕಾರಣವೆನೆಂದು ತಿಳಿದು ಬಂದಿಲ್ಲ. ಮೃತಪಟ್ಟ ಯುವಕ ಕಳೆದ 4 ವರ್ಷಗಳ ಹಿಂದೆ ಸುಳ್ಯದಲ್ಲಿ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಕೆಲಸಮಾಡಿಕೊಂಡಿದ್ದರು. ಪ್ರಸ್ತುತ ಕೂಲಿ ಕೆಲಸ ಮಾಡಿಕೊಂಡಿದ್ದರು.










