ಸಭಾ ಕಾರ್ಯಕ್ರಮ, ತುಳು ಸಾಮಾಜಿಕ ನೀತಿ ಭೋದಕ ನಾಟಕ “ಜೈ ಭಜರಂಗ ಬಲಿ”















ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ಪೈಕ ಮತ್ತು ಶಾಲಾ ಹಿರಿಯ ವಿದ್ಯಾರ್ಥಿಗಳು ಹಾಗೂ ಊರ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ಕ್ರೀಡೋತ್ಸವ ಹಾಗೂ ವಾರ್ಷಿಕೋತ್ಸವ ಸಮಾರಂಭವು ನ.8 ರಂದು ನಡೆಯಲಿದೆ.
ಬೆಳಿಗ್ಗೆ ಗಂಟೆ 8.30 ಕ್ಕೆ ಕ್ರೀಡೋತ್ಸವ ಉದ್ಘಾಟನೆ ನಡೆಯಲಿದೆ. ಹಿರಿಯ ನಾಗರಿಕರಾದ ನಾಗಪ್ಪ ಗೌಡ ಬೊಮ್ಮೆದೇರೆ ಇವರು ಧ್ವಜಾರೋಹಣ ನೆರವೇರಿಸುವರು.
ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶ್ರೀಮತಿ ಸುಮಾವತಿ ಅಧ್ಯಕ್ಷತೆ ವಹಿಸಲಿದ್ದಾರೆ.
ಹಿರಿಯರಾದ ಹೊನ್ನಪ್ಪ ಗೌಡ ಬೊಳ್ಳೂರು ಪೈಕ ಇವರು ಉದ್ಘಾಟಿಸಲಿದ್ದಾರೆ. ಬಳಿಕ ಕ್ರೀಡಾಕೂಟ ನಡೆಯಲಿದೆ. ಅಪರಾಹ್ನ ಗಂಟೆ 2.00 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಶಾಸಕಿ ಭಾಗೀರಥಿ ಮುರುಳ್ಯ ಆವರಣ ಗೋಡೆ ಮತ್ತು ಗೇಟ್ ಉದ್ಘಾಟನೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿರಲಿದ್ದಾರೆ. ನಾಲ್ಕು ಮಂದಿ ಸಾಧಕರಿಗೆ ಸನ್ಮಾನ ನಡೆಯಲಿದೆ. ಸಭಾ ಕಾರ್ಯಕ್ರಮ ನಡೆದ ಬಳಿಕ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ತುಳು ಸಾಮಾಜಿಕ ನೀತಿ ಭೋದಕ ನಾಟಕ ” ಜೈ ಭಜರಂಗ ಬಲಿ” ನಡೆಯಲಿದೆ.










